ಅಮೆರಿಕದಲ್ಲಿ ನಡೆದ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆಗೈದ ಕಾರ್ಕಳದ ರಾಮಪ್ರಕಾಶ್ ಶೆಟ್ಟಿ ಮತ್ತು ಶ್ರೀಮತಿ ಶಲ್ಮಿಲಿ ಶೆಟ್ಟಿ ದಂಪತಿಗಳ ಸುಪುತ್ರ ಆಯುಷ್ ಶೆಟ್ಟಿ ಅವರನ್ನು ಮುನಿಯಾಲು ಉದಯ ಕುಮಾರ್ ಶೆಟ್ಟಿಯವರು ಅವರ ಮನೆಗೆ ತೆರಳಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷರಾದ ಸುಭಿತ್ ಎನ್.ಆರ್, ಕೆ.ಎಮ್.ಎಫ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಪ್ರವೀಣ್ ಶೆಟ್ಟಿ, ಸುದರ್ಶನ್ ಬಂಗೇರ ಕಾಂತಾವರ, ಸೂರಜ್ ಶೆಟ್ಟಿ ನಕ್ರೆ, ಮಂಜುನಾಥ ಜೋಗಿ, ಸುಹಾಸ್ ಕಾವ ಮೊದಲಾದವರು ಉಪಸ್ಥಿತರಿದ್ದರು.