ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವು ಜುಲೈ 27 ರಂದು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ನೆರವೇರಿತು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಲಯನ್ ಎನ್.ಎಮ್ ಹೆಗ್ಡೆ ಎಮ್.ಜೆ.ಎಫ್ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅತ್ಯುತ್ತಮ ರೀತಿಯಲ್ಲಿ ನೆರವೇರಿಸಿ, ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿಯವರು ಅಧ್ಯಕ್ಷೀಯ ಭಾಷಣ ಮಾಡಿದರು. ಲಯನ್ಸ್ ಜಿಲ್ಲಾ ಚೀಫ್ ಡಿಸ್ಟ್ರಿಕ್ಟ್ ಎಡ್ಮಿನಿಸ್ಟ್ರೇಟರ್ ಲಯನ್ ಯಡಾಡಿ ಅರುಣ್ ಕುಮಾರ್ ಹೆಗ್ಡೆ, ರೀಜನ್ ಚೇರ್ ಪರ್ಸನ್ ಲಯನ್ ರಜತ್ ಹೆಗ್ಡೆ, ಝೋನ್ ಚೇರ್ ಪರ್ಸನ್ ಲಯನ್ ಸಂತೋಷ್ ಶೆಟ್ಟಿ, ರೀಜನ್ ಸೆಕ್ರೆಟರಿ ಲಯನ್ ಏಕನಾಥ್ ಬೋಳಾರ್ ಶುಭ ಶಂಸನೆಗೈದರು.

ಮಾಜಿ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್, ಕ್ಲಬ್ ನ ನೂತನ ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ ಮತ್ತು ನಿಕಟಪೂರ್ವ ಕಾರ್ಯದರ್ಶಿ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು. ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆಯವರು ಸ್ವಾಗತಿಸಿ, ಕ್ಲಬ್ ನ ಸದಸ್ಯರಿಗೆ ಕೃತಜ್ನತೆಗಳನ್ನು ಹೇಳಿದರು. ಲಯನ್ ಬನ್ನಾಡಿ ದೀಪಕ್ ಕುಮಾರ್ ಶೆಟ್ಟಿಯವರು ಫ್ಲಾಗ್ ಸೆಲ್ಯುಟೇಷನ್ ಹಾಗೂ ಲಯನ್ ಕೂರಾಡಿ ಶೇಖರ್ ಶೆಟ್ಟಿಯವರು ಕೋಡ್ ಆಫ್ ಕಂಡಕ್ಟ್ ವಾಚಿಸಿದರು.ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಸ್ಥಾಪಕಾಧ್ಯಕ್ಷ ಹಾಗೂ ಮಾಜಿ ರೀಜನ್ ಚೇರ್ ಪರ್ಸನ್ ಲಯನ್ ಅಡ್ವೋಕೇಟ್ ಬನ್ನಾಡಿ ಸೋಮನಾಥ ಹೆಗ್ಡೆ ಪದಪ್ರಧಾನ ಅಧಿಕಾರಿಯ ಪರಿಚಯ, ಮಾಜಿ ಅಧ್ಯಕ್ಷರಾದ ಲಯನ್ ಅಡ್ವೋಕೇಟ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿಯವರು ನೂತನ ಅಧ್ಯಕ್ಷರ ಪರಿಚಯ ಮಾಡಿದರು. ಕ್ಲಬ್ ನ ನೂತನ ಕಾರ್ಯದರ್ಶಿ ಲಯನ್ ಚಂದ್ರ ಶೆಟ್ಟಿ ಯಾಳಕ್ಲು ವಂದಿಸಿದರು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊ| ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.