ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-೩೮ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಜುಲೈ ೨೬ರ ಶನಿವಾರದಂದು ಅಪರಾಹ್ನ ೩.೩೦ಕ್ಕೆ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ “ಬಹುರತ್ನ ಪ್ರಸವೀ ಭಾರತೀ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.