ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಖಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಹಿರಿಯ ಮತ್ತು ದಕ್ಷ ಅಧ್ಯಕ್ಷ, ಕಳೆದ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ, ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಸುವಂತೆ ಮಾಡಿದ ಮಹಾನ್ ಸಾಧಕ ಎಸ್ ಪ್ರಕಾಶ್ಚಂದ್ರ ಶೆಟ್ಟಿಯವರಿಗೆ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಸಹಕಾರ ಸಂಘವು ಈಗ ಸಾವಿರ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ದಾಖಲಿಸುತ್ತಿರುವುದು ಅವರ ಪ್ರಗತಿಪರ ನಾಯಕತ್ವದ ಪ್ರತೀಕವಾಗಿದೆ. ಅವರ ಈ ಅಮೂಲ್ಯ ಸೇವೆ ಹಾಗೂ ಕ್ರಿಯಾತ್ಮಕ ಚಿಂತನೆಗಳನ್ನು ಗುರುತಿಸಿ ಅವಿಭಜಿತ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಕುಂದಾಪುರ ಬಂಟರ ಸಂಘದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಜುಲೈ 20 ರಂದು ಬೆಳಗ್ಗೆ 10.30 ಕ್ಕೆ 2024- 25ನೇ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.