ಜುಲೈ 10 ರಂದು ಗುರುವಾರ ಗುರುಪೂರ್ಣಿಮೆಯ ನಿಮಿತ್ತ ಜುಹೀ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಬಂಟ್ಸ್ ಸೆಂಟರ್ ನಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವದಲ್ಲಿ
ನಡೆದ ಗುರು ವಂದನಾ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಭಾಗವಹಿಸಿ ಶ್ರೀ ಗುರು ನಿತ್ಯಾನಂದ ಸ್ವಾಮೀಜಿಯವರ ಭಾವಚಿತ್ರಕ್ಕೆ ಫಲ ಪುಷ್ಪಾದಿಗಳನ್ನು ಅರ್ಪಿಸಿ, ಭಜನೆ ಹಾಗೂ ಕುಣಿತ ಭಜನೆಯೊಂದಿಗೆ ಬಹು ವಿಜೃಂಭಣೆಯಿಂದ ಗುರುಪೂರ್ಣಿಮೆಯನ್ನು ನೆರವೇರಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಗುರು ವಂದನೆಯನ್ನು ಸಮರ್ಪಿಸಿ ಹಿತ ನುಡಿಯನ್ನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಐಕಳ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಅಡ್ವೋಕೇಟ್ ಶೇಖರ ಶೆಟ್ಟಿ, ಖಜಾಂಚಿ ಸಿ.ಎ ವಿಶ್ವನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ಯಾಮ ಎನ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ ಶಾರದಾ ಶೆಟ್ಟಿ, ಲತಾ ಜಿ ಶೆಟ್ಟಿ, ಮೊದಲಾದ ಗಣ್ಯರು ಉಪಸ್ಥಿತರಿದ್ದರಲ್ಲದೆ ಮಹಿಳಾ ವಿಭಾಗದ ಸಮಿತಿ ಸದಸ್ಯೆ ಗೀತಾ ಶೆಟ್ಟಿಯವರ ಪತಿ ಪನ್ವೇಲ್ ಕಾಂದಾ ಕಾಲೊನಿ ಶ್ರೀ ದಿವಾಕರ ಕೆ ಶೆಟ್ಟಿಯವರು ತುಂಬು ಸಹಕಾರ ನೀಡಿ ಉಪಸ್ಥಿತರಿದ್ದರು. ಕೊನೆಗೆ ಗುರು ದೇವರ ಭಾವಚಿತ್ರಕ್ಕೆ ಆರತಿ ಬೆಳಗಿಸಿ, ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.