ಚಿಣ್ಣರಬಿಂಬ ಸಂಸ್ಥೆಯು ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ಕನ್ನಡದ ಕಲರವವನ್ನು ಮಾಡುತ್ತಾ, ಚಿಣ್ಣರ ಮುಖೇನ ಕನ್ನಡದ ತೇರನ್ನು ಎಳೆಯುವುದರ ಜೊತೆಗೆ ಅದರ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಕೆಲಸವನ್ನು ಮಾಡುತ್ತಿದೆ. ಇದು ತುಳು ಕನ್ನಡಿಗರಾದ ನಮಗೆಲ್ಲಾ ಹೆಮ್ಮೆಯ ವಿಷಯ. ಚಿಣ್ಣರಬಿಂಬ ಚಿಣ್ಣರಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಒಂದು ವಿದ್ಯಾಲಯ ಎಂದರೂ ತಪ್ಪಾಗಲಾರದು. ಮಕ್ಕಳಿಗೆ ನಾಡು, ನುಡಿ, ಸಂಪ್ರದಾಯದ ಜೊತೆಗೆ ಗುರು ಹಿರಿಯರಿಗೆ ಗೌರವ, ಭ್ರಾತೃತ್ವದ ಭಾವ, ಶಿಸ್ತು, ಸಮಯ ಪರಿಪಾಲನೆ, ರಾಷ್ಟ್ರಪ್ರೇಮ, ಧಾರ್ಮಿಕತೆ, ಆಧ್ಯಾತ್ಮಿಕತೆಯ ಅರಿವು, ಹಬ್ಬ ಹರಿದಿನಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುವುದು ಈ ಸಂಸ್ಥೆಯ ವೈಶಿಷ್ಟ್ಯತೆಯಾಗಿದೆ. ಇಲ್ಲಿ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲ. ಸುಮಾರು 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಮುಕ್ತ ವಾತಾವರಣದಲ್ಲಿ ಬೆಳೆಯುವ ನೆಮ್ಮದಿಯ ತಾಣವೆಂದರೂ ಅತಿಶಯೋಕ್ತಿಯಾಗಲಾರದು.

ಸುಮಾರು 23 ವರ್ಷಗಳ ಮೊದಲು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳು ಕನ್ನಡಿಗರ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಆ ಸಮಯದಲ್ಲಿ ಮಕ್ಕಳ ಹಿತಾಸಕ್ತಿಯ ಬಗ್ಗೆ ಯೋಚನೆಯನ್ನು ಮಾಡುತ್ತಾ ಅವರ ಭವಿಷ್ಯದ ಬಗ್ಗೆ ಹೊಂಗನಸನ್ನು ಕಾಣುತ್ತಾ ಮಕ್ಕಳ ಬಾಳ ಭವಿಷ್ಯ ಉಜ್ವಲವಾಗಬೇಕು. ದೇಶದ ಉತ್ತಮ ಪ್ರಜೆಗಳಾಗಬೇಕು ಎಂಬ ಸದುದ್ದೇಶದಿಂದ ಸಮಾನ ಮನಸ್ಕರೊಡಗೂಡಿ ಚಿಣ್ಣರಬಿಂಬವನ್ನು ಸ್ಥಾಪಿಸಲಾಯಿತು. ತದನಂತರ ಮುಂಬಯಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿರುವ ಶ್ರೀ ಪ್ರಕಾಶ್ ಭಂಡಾರಿ ಅವರ ಮುಂದಾಳತ್ವದಲ್ಲಿ, ಸಮರ್ಥ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಪ್ರಗತಿಯನ್ನು ಸಾಧಿಸುತ್ತಾ ಹೋಯಿತು. ಕೇವಲ 50 ಮಕ್ಕಳಿಂದ ಆರಂಭಗೊಂಡ ಈ ಸಂಸ್ಥೆ ಇಂದು ಏಳು ಸಾವಿರಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಹೊಂದಿ ಮಹಾರಾಷ್ಟ್ರದಲ್ಲಿಯೇ ಕೊಂಬೆ ರೆಂಬೆಗಳನ್ನು ಚಾಚಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರೆ ಚಿಣ್ಣರಬಿಂಬದ ಸಾಧನೆಯ ಆಳದ ಮಟ್ಟವನ್ನು ನಾವು ಗುರುತಿಸಬಹುದು. ಇಲ್ಲಿ ರೂವಾರಿಗಳ ಪದಾಧಿಕಾರಿಗಳು, ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುವ ಪಾಲಕರು ಕೂಡಾ ಅಷ್ಟೇ ಸಕ್ರಿಯರಾಗಿ ಭಾಗವಹಿಸಿ ಈ ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಇವೆಲ್ಲದರ ಜೊತೆಯಲ್ಲಿ ಚಿಣ್ಣರಬಿಂಬದ ವಿಶ್ವಸ್ಥರಾದ ಡಾ| ಆರ್.ಕೆ ಶೆಟ್ಟಿ, ಸಿ.ಎ ಎನ್.ಬಿ ಶೆಟ್ಟಿ, ಡಾ| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಕೆ.ಎಂ ಶೆಟ್ಟಿ ಇವರು ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಮಕ್ಕಳಿಗೆ ಚಿಣ್ಣರಬಿಂಬದಲ್ಲಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯನ್ನು ಕೂಡಾ ನಿರ್ಮಿಸುತ್ತಿದೆ. ಚಿಣ್ಣರು ಕನ್ನಡದಲ್ಲಿ ಭಜನೆ, ಭಾಷಣ ಏಕಪಾತ್ರಾಭಿನಯ, ನಾಟಕ, ಯಕ್ಷಗಾನ, ಜಾನಪದ ಗೀತೆ, ಭಾವಗೀತೆ, ಜಾನಪದ ನೃತ್ಯ ನಿರೂಪಣೆ ಮೊದಲಾದ ಕಲೆಗಳಲ್ಲಿ ಪಾರಂಗತರನ್ನಾಗಿ ಮಾಡುವುದರಿಂದ ಚಿಣ್ಣರಬಿಂಬದ ಕಾರ್ಯಕ್ರಮ ವೀಕ್ಷಿಸಿದವರೆಲ್ಲರೂ ಮುಂಬಯಿಯಲ್ಲಿ ಕನ್ನಡದ ಹಬ್ಬವೇ ಮೇಳೈಸುತ್ತಿದೆ ಎಂದು ಉದ್ಘಾರ ಮಾಡುತ್ತಾರೆ. ಇದು ಚಿಣ್ಣರಬಿಂಬದ ನಿಜವಾದ ಸಾಧನೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಅದಿತ್ಯವಾರ ಕನ್ನಡ ಮತ್ತು ಭಜನೆ ತರಗತಿಗಳು 3 ತಾಸು ನಡೆಯುತ್ತವೆ. ಪ್ರತಿ ವರ್ಷವೂ ಶಿಸ್ತುಬದ್ಧವಾಗಿ ಕನ್ನಡ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಾಲ್ಕು ವರ್ಷದ ಪರೀಕ್ಷೆ ಬರೆದವರಿಗೆ ಸರ್ಟಿಫಿಕೇಟ್ ಗಳನ್ನು ಕೂಡಾ ವಿತರಿಸಲಾಗುತ್ತದೆ. ಅಲ್ಲದೇ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಿ ಅವರಿಂದ
ಮಕ್ಕಳಿಗೆ ಮಾನವೀಯ ಮೌಲ್ಯಗಳ, ನೈತಿಕ ಮೌಲ್ಯಗಳ ಬಗ್ಗೆ ತಿಳಿಸುವುದರ ಮೂಲಕ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಕೆಲಸವನ್ನು ಮಾಡುತ್ತಿದೆ.
ಹಾಗಾಗಿ 2025 – 26 ರ ಸಾಲಿನ ಮಕ್ಕಳ ಪ್ರವೇಶಕ್ಕಾಗಿ ಜುಲೈ 31ರ ತನಕ ಅವಕಾಶವಿದೆ. ಚಿಣ್ಣರಬಿಂಬ ಚಾರಿಟೇಬಲ್ ಟ್ರಸ್ಟ್ ನ 2025 – 26 ರ ಸಾಲಿನ ಪ್ರವೇಶಗಳಿಗೆ ಸಂಪರ್ಕಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.
ಮೀರಾರೋಡ್ : 9757295789,
9867053703
ಭಾಯಂದರ್ / ವಸಾಯಿ :
8828046667, 9892924865
ಪೇಜಾವರ :
9769295494
ಮಲಾಡ್ :
9594351224, 9892826760
ಕಾಂದಿವಲಿ :
9820769036
ಗೋರೆಗಾಂವ್ :
9892998958
ಎಸ್.ಎಂ ಶೆಟ್ಟಿ :
8450933056
ಸಾಕಿನಾಕ / ಗೀತಾಂಬಿಕಾ :
9930809782
ಉಮಾಮಹೇಶ್ವರಿ :
9029611665
ಸಯನ್ – ಕೋಳಿವಾಡ :
9757381362
ಥಾಣೆ ನವೋದಯ :
9619124060, 9029533759
ಆದಿಶಕ್ತಿ ಮಾಜಿವಾಡ :
9004848000
ಭಾಂಡುಪ್ / ಮುಲುಂಡ್ (ಪೂ) :
9892519775
ವಿಕ್ರೋಲಿ :
9029127031
ಘೋಡ್ ಬಂದರ್ :
9967106310
ಕಲ್ವಾ :
9833275921
ಐರೋಲಿ :
9322427161
ನೆರೋಲ್/ ಕಲಂಬೋಲಿ :
9004794941
ಘನ್ಸೋಲಿ :
09920285368
ಡೊಂಬಿವಲಿ ಪೂರ್ವ / ಕಲ್ಯಾಣ್/ ಭಿವಂಡಿ :
8454030238
ಡೊಂಬಿವಲಿ ಪಶ್ಚಿಮ :
9321097128
ಪಲಾವ :
9892733231,