ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜು ಕಳೆದ 26 ವರ್ಷಗಳಿಂದ ಕಲಿಕೆಗೆ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಮೂಲಕ ಇದುವರೆಗ 63 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡಿದ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಪಿಯು ಪ್ರವೇಶಾತಿ ಆರಂಭಗೊಂಡಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ.

ವಿದ್ಯಾರ್ಥಿಗಳು ತಮ್ಮ 9ನೇ ತರಗತಿ ಅಥವಾ ಪ್ರಿಪರೇಟರಿ ಪರೀಕ್ಷಾ ಅಂಕಗಳ ಆಧಾರದ ಮೇಲೆ ಕಾಲೇಜಿನಲ್ಲಿ ತಮ್ಮ ಸೀಟುಗಳನ್ನು ಕಾಯ್ದಿರಿಸಬಹುದು.ಹತ್ತನೇ ತರಗತಿಯ ನಂತರದ ಎರಡು ವರ್ಷಗಳು, ವಿದ್ಯಾರ್ಥಿ ಜೀವನದ ಪ್ರಮುಖ ಕಾಲಘಟ್ಟ. ಈ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹಾಗೂ ಅಂಕಗಳಿಸುವ ಕಡೆಗೆ ಹೆಚ್ಚು ಒತ್ತು ಕೊಟ್ಟು ಕಲಿಯಬೇಕಾಗುತ್ತದೆ. ಅವರ ಜೀವನದ ಗುರಿ ಸಾಧನೆಯು ಪಿಯುಸಿಯಲ್ಲಿ ಅವರು ಪಡೆಯುವ ಅಂಕಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಹೆತ್ತವರು ಸಾಧಾರಣವಾಗಿ ಮಕ್ಕಳನ್ನು ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಿ ಓದಿನ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸುತ್ತಾರೆ. ಇದನ್ನು ನಾನು ಕಳೆದ 26 ವರ್ಷಗಳಿಂದ ಗಮನಿಸಿದ್ದೇನೆ, ಹಲವಾರು ಹೆತ್ತವರ ಕನಸನ್ನು ಅರಿತುಕೊಂಡಿದ್ದೇನೆ.
ಹಾಗಾಗಿ ಸಮಗ್ರ ಶಿಕ್ಷಣದ ಜೊತೆಗೆ ಪಿಯುಸಿ ಕಾಲಘಟ್ಟಕ್ಕೆ ಓದು ಮತ್ತು ಅಂಕಗಳಿಗೆ ನಮ್ಮಲ್ಲಿ ಆದ್ಯತೆ ಇದೆ. ವಿದ್ಯಾರ್ಥಿ ಮತ್ತು ಹೆತ್ತವರು ಮಕ್ಕಳ ಭವಿಷ್ಯವನ್ನು ಕಟ್ಟಲು ಒಂದು ಉತ್ತಮ ವಿದ್ಯಾಸಂಸ್ಥೆಯನ್ನು ಆರಿಸಬೇಕಿದೆ. ರಾಜ್ಯ ಹಾಗೂ ಹೊರರಾಜ್ಯದ ಅನುಭವಿ ಪರಿಣತ ಶಿಕ್ಷಕ ತಂಡ ಎನ್ ಸಿಇ ಆರ್ ಟಿ ಪಠ್ಯಕ್ರಮದ ಜೊತೆಗೆ ಸಿಇಟಿ, ನೀಟ್, ಜೆಇಇ ಎಇಇ, ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಯೋಜಿತ ವ್ಯವಸ್ಥೆಯ ಮೂಲಕ ತರಬೇತಿ ನೀಡುತ್ತಾರೆ. ಅಲ್ಲದೆ ನಾಟ , ಎನ್ ಡಿ ಎ, ಸಿಎ, ಸಿಎಸ್, ಕ್ಲಾಟ್ ಹಾಗೂ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ರಾಜ್ಯ ಮತ್ತು ಸಿಬಿಎಸ್ ಎರಡು ವಿಭಾಗಗಳಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ‘ಎಜುಕೇಶನ್ ಫಸ್ಟ್’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.