ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಾ ಪ್ರತಿಫಲಾಪೇಕ್ಷೆ ಇಲ್ಲದೇ ಕನ್ಯಾನ ಸದಾಶಿವ ಶೆಟ್ಟರ ಸಮಾಜ ಸ್ಪಂದನೆಯ ಕಲ್ಯಾಣ ಕಾರ್ಯ ಅನುಕರನೀಯವಾಗಿದೆ. ಅವರಿಗೆ ಅರ್ಹವಾಗಿಯೇ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿರುವುದರಿಂದ ಅವರ ಸಾಮಾಜಿಕ ಚಟುವಟಿಕೆ ನಿರಂತರವಾಗಿ ನಡೆಯಲಿ. ಇಂತಹ ಮಾನವೀಯ ಸಂಬಂಧದ ವ್ಯಕ್ತಿತ್ವದವರು ಸಮಾಜದಲ್ಲಿ ಹೆಚ್ಚಬೇಕು ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞರಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ಬೆಂಗಳೂರಿನ ಆಶ್ರಮಕ್ಕೆ ಭೇಟಿ ನೀಡಿದ ಸಮಾಜ ಸೇವಕ ಡಾ| ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಆಶೀರ್ವಾದ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನಿಂದ ಗೌರವಿಸಲ್ಪಟ್ಟಿರುವ ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಆಶ್ರಮದಿಂದ ವಿಶೇಷವಾಗಿ ಶಾಲು ಹೊದಿಸಿ, ಸ್ವರಣಿಕೆ ನೀಡಿ ಗೌರವಿಸಿದರು. ಚಿತ್ರನಟ ಹಾಗೂ ನಿರ್ಮಾಪಕ ಪಡುಬಿದ್ರಿ ಗುರುರಾಜ್ ಹೆಗ್ಡೆ, ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಘವ್ ಸೂರ್ಯ, ರಾಹುಲ್ ಸಿ ಭಟ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.