ಹೈದರಾಬಾದ್ ಬಂಟ್ಸ್ ಹೋಟೆಲ್ ಉದ್ಯಮಿಗಳಿಂದ ಯುವ ಸಂಘಟಕ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಹೋಟೆಲ್ ಸುಪ್ರಭಾತಮ್ ನಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಾದ ಅಲ್ತಾರು ದೇಬೆಟ್ಟು ಜಯರಾಮ ಶೆಟ್ಟಿ ಹಾಗೂ ಶೇಖರ್ ಶೆಟ್ಟಿ ವಂಡ್ಸೆ ಸನ್ಮಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ಅಣ್ಣಪ್ಪ ಶೆಟ್ಟಿ ಮಲ್ಯಾಡಿ, ಉದಯ್ ಕುಮಾರ್ ಶೆಟ್ಟಿ ಹಕ್ಲಾಡಿ, ಅಜಿತ್ ಶೆಟ್ಟಿ ನೂಜಾಡಿ, ಸುರೇಶ ಶೆಟ್ಟಿ ಯಾಳಹಕ್ಲು, ಚಂದ್ರ ಶೆಟ್ಟಿ ಮಲ್ಯಾಡಿ, ಶ್ರೀಕಾಂತ್ ಶೆಟ್ಟಿ ಉಳ್ತೂರು, ಸಂಯುಕ್ತ ಶೆಟ್ಟಿ ಬಾಳೆಮಣೆ ಉಪಸ್ಥಿತರಿದ್ದರು.