ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದ ತುಳು ಸಿನಿಮಾ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿದೆ. ಒಟ್ಟು ಮೂರು ಹಂತಗಳಲ್ಲಿ ಚಿತ್ರೀಕರಣ ಮಾಡಿದ್ದ ಈ ಸಿನಿಮಾ ಫೆಬ್ರವರಿ 2ರಿಂದ ಸಾಲೆತ್ತೂರು, ಕುಳಾಲು, ಕಾಡುಮಠ, ಕುಡ್ತಮುಗೇರು ಪರಿಸರದಲ್ಲಿ 5 ದಿನ ಹಾಡಿನ ಚಿತ್ರೀಕರಣವನ್ನು ಮಾಡಿ ಫೆಬ್ರವರಿ 6ರಂದು ಕುಂಬಳಕಾಯಿ ಹೊಡೆಯುವ ಮೂಲಕ ಯಶಸ್ವಿಯಾಗಿ ಚಿತ್ರೀಕರಣವನ್ನು ಮುಗಿಸಿದೆ. ಒಟ್ಟು 3 ಹಂತಗಳಲ್ಲಿ ದ.ಕ ಜಿಲ್ಲೆಯ ಬೇರೆ ಬೇರೆ ಪ್ರದೇಶದಲ್ಲಿ ಯಶಸ್ವಿಯಾಗಿ ಚಿತ್ರೀಕರಣವನ್ನು ಮಾಡಿ ಮುಗಿಸಿದ ಚಿತ್ರತಂಡ ಬೇಗನೆ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.
ಚಿತ್ರದಲ್ಲಿ ಒಟ್ಟು 2 ಹಾಡುಗಳಿದ್ದು, 2 ಫೈಟುಗಳಿವೆ. ದ.ಕ ಜಿಲ್ಲೆಯ ರಮಣೀಯ ಸ್ಥಳದಲ್ಲಿ ಚಿತ್ರೀಕರಣ ಮಾಡುವುದರೊಂದಿಗೆ, ಕರಾವಳಿಯ ಮನಮೋಹಕ ದೃಶ್ಯಗಳನ್ನು ಛಾಯಾಗ್ರಾಹಕ ಉದಯ ಬಳ್ಳಾಲ್ ಬಹಳ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಹಾಡಿನ ಚಿತ್ರೀಕರಣದಲ್ಲಿ ರಾಜೇಶ್ ಕಣ್ಣೂರು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜ ಹರೇಕಳ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ವಿಜಯಹರಿ ರೈ ಕುರಿಯ, ದಯಾನಂದ ಬೆಟ್ಟಂಪಾಡಿ, ಭಾಸ್ಕರ ಮಣಿಪಾಲ, ರೂಪಶ್ರೀ ವರ್ಕಾಡಿ, ಶ್ರೀಮತಿ ಜಯಶೀಲ, ರಾಧಿಕಾ, ದಿಶಾರಾಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.
ನಿರ್ಮಾಪಕ ಪ್ರತೀಕ್ ಯು ಪೂಜಾರಿ, ಕಥೆ ನಿರ್ದೇಶನ ಭರತ್ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಷರ್ ರಮೇಶ್ ರೈ ಕುಕ್ಕುವಳ್ಳಿ, ಕ್ಯಾಮೆರಾ ಉದಯ್ ಬಳ್ಳಾಲ್, ಸಂಗೀತ ಎಲ್ ವಿ ಯಸ್, ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶಕ, ಸಜೇಶ್ ಪೂಜಾರಿ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಜಗನ್ನಾಥ ಶೆಟ್ಟಿ ಬಾಳ, ಸಾಹಸ ಸುರೇಶ್ ಶೆಟ್ಟಿ ಮತ್ತು ನವೀನ್ ಲೋಬೋ, ನೃತ್ಯ ರಾಜೇಶ್ ಕಣ್ಣೂರು, ಪ್ರೊಡಕ್ಷನ್ಸ್ ಮ್ಯಾನೇಜರ್ ಕಾರ್ತಿಕ್ ಶೆಟ್ಟಿ.