ಕುಂದಾಪುರ ಯುವ ಬಂಟರ ಸಂಘದ ಆಶ್ರಯದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನದ ಬದಲು ಆಧುನಿಕ ಕಲಿಕಾ ಸಾಧನಗಳನ್ನು ವಿತರಿಸುವ ಈ ಕಾರ್ಯಕ್ರಮ ಮಾದರಿಯಾಗಿದೆ. ಇದರಿಂದ ಸಮುದಾಯದ ಮಕ್ಕಳ ಶೈಕ್ಷಣಿಕ ಉನ್ನತಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ. ಯುವ ಸಂಘಟನೆ ಹತ್ತಾರು ಮಾದರಿ ಕಾರ್ಯ ಮಾಡುತ್ತಿದೆ ಎಂದು ಬೆಂಗಳೂರಿನ ಸೌತ್ ಫೀಲ್ಡ್ ಫೈಂಟ್ಸ್ ನ ಆಡಳಿತ ನಿರ್ದೇಶಕ ಎಸ್. ಎಸ್. ಹೆಗ್ಡೆ ಶ್ಲಾಘಿಸಿದರು. ಅವರು ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಅರಿವು ಯೋಜನೆಯಡಿ ಸರಕಾರಿ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ಹಸ್ತಾಂತರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೆಕ್ಕ ಪರಿಶೋಧಕ ಸಿಎ ಸುಧಾಕರ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಭದ್ರಾವತಿ ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಚಿಕ್ಕಮಗಳೂರು ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಜಿ. ಶ್ರೀಧರ ಶೆಟ್ಟಿ ಅರಿವು ಯೋಜನೆಗೆ ಚಾಲನೆ ನೀಡಿದರು. ಹಳ್ನಾಡು ಪ್ರತಾಪ್ ಚಂದ್ರ ಶೆಟ್ಟಿ ಪ್ರಾಸ್ತಾವಿಸಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 90 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 500 ಮಂದಿ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಮೌಲ್ಯದ ಆಧುನಿಕ ಕಲಿಕಾ ಸಲಕರಣೆ (ಕಿಟ್) ಗಳನ್ನು ಹಸ್ತಾಂತರಿಸಲಾಗುತ್ತದೆ. ಸಂಘದಿಂದ ಈವರೆಗೆ 7,000 ಕುಟುಂಬಗಳಿಗೆ ಅಂದಾಜು 3 ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ನೆರವು ನೀಡಲಾಗಿದೆ ಎಂದರು.ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಹಿರಿಯ ವಕೀಲ ಟಿ.ಬಿ. ಶೆಟ್ಟಿ, ಸಂಘದ ಗೌರವಾಧ್ಯಕ್ಷೆ ವತ್ಸಲಾ ದಯಾನಂದ ಶೆಟ್ಟಿ, ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರಳೀದರ ಶೆಟ್ಟಿ ಹುಯ್ಯಾರು, ಕೋಶಾಧಿಕಾರಿ ಭರತ್ ರಾಜ್ ಶೆಟ್ಟಿ ಜಾಂಬೂರು, ಅರಿವು ಯೋಜನಾ ಸಂಚಾಲಕ ರಾಜೀವ ಶೆಟ್ಟಿ ಹೆಂಗವಳ್ಳಿ, ನಿರ್ದೇಶಕರಾದ ಡಾ. ರಂಜಿತ್ ಕುಮಾರ್ ಶೆಟ್ಟಿ, ಬೆಳ್ಳಾಡಿ ಅಶೋಕ ಶೆಟ್ಟಿ, ಬಿ. ವಿನಯ ಕುಮಾರ್ ಶೆಟ್ಟಿ, ಫೆವರೇಟ್ ಕ್ಯಾಶೂ ಇಂಡಸ್ಟ್ರೀಸ್ ಮಾಲಕ ಶಂಕರ ಹೆಗ್ಡೆ, ಮರಾಠ ಹಾಸ್ಪಿಟಲಿಟಿ ಪ್ರೈವೇಟ್ ಲಿಮಿಟೆಡ್ ಪುಣೆಯ ಆಡಳಿತ ನಿರ್ದೇಶಕ ಜಯಕರ ಶೆಟ್ಟಿ, ಗುಡಿ ಮಹಾಲಿಂಗೇಶ್ವರ ಹ್ಯೂಮ್ ಪೈಪ್ಸ್ ನ ಮಾಲಕ ಜಯಶೀಲ ಶೆಟ್ಟಿ ಉಪ್ಪುಂದ, ಲಯನ್ಸ್ ಕ್ಲಬ್ ತಲ್ಲೂರು ಸ್ಥಾಪಕಾಧ್ಯಕ್ಷ ನಾರಾಯಣ ಶೆಟ್ಟಿ, ಶಕೀಲಾ ಸುಕುಮಾರ್ ಶೆಟ್ಟಿ ಬಂಟಕೋಡು, ಪ್ರಮುಖರಾದ ಆನಗಳ್ಳಿ ಕರುಣಾಕರ ಹೆಗ್ಡೆ, ಆಜ್ರಿ ದಯಾನಂದ ಶೆಟ್ಟಿ ಆಸ್ಟ್ರೇಲಿಯಾ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಹಂಸರಾಜ ಶೆಟ್ಟಿ ವೈಶಾಲಿ ಕುಂದಾಪುರ, ಅಶೋಕ ಶೆಟ್ಟಿ ಸಂಸಾಡಿ, ಸಟ್ಟಾಡಿ ವಿಜಯಶೆಟ್ಟಿ, ಸುಧಾಕರ ಶೆಟ್ಟಿ ನೆಲಗೊಂದ, ಶಿವರಾಮ ಶೆಟ್ಟಿ ಕರಿಂನಗರ, ಗೋಕುಲ ಶೆಟ್ಟಿ ಉಪ್ಪುಂದ, ಬಿ. ಜಯರಾಮ ಶೆಟ್ಟಿ, ಸಿಎ ಶಾಂತರಾಮ ಶೆಟ್ಟಿ, ಶಂಕರ ಶೆಟ್ಟಿ ಕೂಡಾಲು, ಗುತ್ತಿಗೆದಾರ ಉದಯ ಶೆಟ್ಟಿ ತಲ್ಲೂರು ಮತ್ತಿತರದಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭವಾನಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಆನಗಳ್ಳಿ ಜಯಕರ ಶೆಟ್ಟಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಎಂ ಸಚ್ಚಿದಾನಂದ ಶೆಟ್ಟಿ, ಕಾನೂನು ಕ್ಷೇತ್ರದಲ್ಲಿ ಜಿ ಸಂತೋಷ್ ಕುಮಾರ್ ಶೆಟ್ಟಿ, ಸಮಾಜಸೇವೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಎಸ್ ಜಯಕರ್ ಶೆಟ್ಟಿ, ಸಂಘಟನೆಯಲ್ಲಿ ಬಿ ಅರುಣ್ ಕುಮಾರ್ ಹೆಗ್ಡೆ, ಯಕ್ಷಗಾನ ಕ್ಷೇತ್ರದಲ್ಲಿ ಡಾ| ತಲ್ಲೂರು ಶಿವರಾಮ್ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಡಾ| ಚಿತ್ತರಂಜನ್ ಹೆಗ್ಡೆ, ಕ್ರೀಡಾ ಕ್ಷೇತ್ರದಲ್ಲಿ ಬಾಲಕೃಷ್ಣ ಶೆಟ್ಟಿ ಅಂಪಾರು, ಸಹಕಾರಿ ಕ್ಷೇತ್ರದಲ್ಲಿ ಎಂ ಮಹೇಶ್ ಹೆಗ್ಡೆ ಮೊಳಹಳ್ಳಿ ಅವರಿಗೆ ಬಂಟ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿ.ಬಿ ಹೆಗ್ಡೆ ಕಾಲೇಜು ಉಪಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಸ್ವಾಗತಿಸಿ, ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿದರು.