ಬಂಟರ ಚಾವಡಿ ಪರ್ಕಳ (ರಿ) ಇದರ ವತಿಯಿಂದ ಮುಂಬಯಿಯ ಆಲ್ ಕಾರ್ಗೋ ಲಾಗಿಸ್ಟಿಕ್ ಮತ್ತು ಅವಶ್ಯ ಫೌಂಡೇಶನ್ ವತಿಯಿಂದ ಕೊಡಮಾಡುವ ‘ದಿಶಾ’ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಪರ್ಕಳದ ಸುರಕ್ಷಾ ಸಭಾ ಭವನದಲ್ಲಿ ಜನವರಿ 11 ರಂದು ಸಂಘದ ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬಹಳ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಜರಗಿತು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹಾಗೂ ಸವಿಸ್ತಾರ ಆಳ್ವ (ಸೀನಿಯರ್ ಎಕ್ಸಿಕ್ಯೂಟಿವ್ ಆಲ್ ಕಾರ್ಗೋ ಲಾಗಿಸ್ಟಿಕ್ಸ್ ಲಿಮಿಟೆಡ್) ಉಪಸ್ಥಿತರಿದ್ದರು. ವಿವಿಧ ಶಾಲೆಯ 176 ವಿದ್ಯಾರ್ಥಿಗಳಿಗೆ ಸುಮಾರು 9,50,000 ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕಾರ್ಯಧ್ಯಕ್ಷ ವಸಂತ ಶೆಟ್ಟಿ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿ ದಿವಾಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಸ್ವಾಗತಿಸಿದರು. ಕಾರ್ಯಧ್ಯಕ್ಷ ವಸಂತ ಶೆಟ್ಟಿ ಹಿರೇಬೆಟ್ಟು ಧನ್ಯವಾದವನ್ನು ಅರ್ಪಿಸಿದರು.
Previous Articleಬಂಟರ ಸಂಘ ಕಡಂದಲೆ – ಪಾಲಡ್ಕ (ರಿ) : ವಿದ್ಯಾರ್ಥಿ ವೇತನ ವಿತರಣೆ
Next Article ಅಭಿಮತ ಸಂಭ್ರಮ : ಜನವರಿ 19 ರಂದು ಸಮಾಲೋಚನಾ ಸಭೆ