ಬಂಟರ ಸಂಘ ಪುಣೆಯ ಸುವರ್ಣ ಮಹೋತ್ಸವ ಆಚರಣೆಗೆ ಪೂರಕವಾಗಿ ಕೆ.ಎಸ್.ಎಚ್ ಟ್ರೋಫಿ- 2025 ಅಂತರಾಷ್ಟ್ರೀಯ ಬಂಟರ ಕ್ರೀಡಾಕೂಟವು ಜನವರಿ 5ರಂದು ಬೆಳಿಗ್ಗೆ 8ರಿಂದ ಪುಣೆಯ ಅಂತಾರಾಷ್ಟ್ರೀಯ ಕ್ರೀಡಾ ಸಂಕುಲ ಬಾಲೆವಾಡಿಯ ಶ್ರೀ ಶಿವಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ ದೇಶ ವಿದೇಶದಲ್ಲಿರುವ ಬಂಟ ಕ್ರೀಡಾಪಟುಗಳಿಗೆ ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಅಂತಾರಾಷ್ಟ್ರೀಯ ಕ್ರೀಡಾ ಕೂಟದ ಆಯೋಜನೆಯಂತೆ ವಿಜೃಂಭಣೆಯಿಂದ ನಡೆಯಲಿದೆ. ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಗೌರವಾಧ್ಯಕ್ಷರಾದ ಕೆ.ಎಸ್.ಎಚ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಂ.ಡಿ ಕುಶಲ್ ಹೆಗ್ಡೆಯವರ ಪ್ರಾಯೋಜಕತ್ವದಲ್ಲಿ ಕ್ರೀಡಾಕೂಟವು ನಡೆಯುತ್ತಿದ್ದು, ವಿಜೇತರಾದವರಿಗೆ ಕೆ.ಎಸ್.ಎಚ್ ಟ್ರೋಫಿ ಹಾಗೂ ನಗದು ಬಹುಮಾನ ಪಡೆಯಲಿದ್ದಾರೆ.
ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಸಭಾಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಕ್ರೀಡಾ ಕೂಟದ ಉದ್ಘಾಟನೆಯನ್ನು ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾಡಲಿದ್ದು, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕುಶಲ್ ಹೆಗ್ಡೆಯವರು ದೀಪ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಕ್ರೀಡಾ ಮಂತ್ರಿ ದತ್ತಾತ್ರೇಯ ಭಾರ್ನೆ, ರಾಜ್ಯ ಮಂತ್ರಿ ಶ್ರೀಮತಿ ಮಾಧುರಿ ಮಿಸಾಲ್ ಆಗಮಿಸಲಿದ್ದು, ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಾಲತಿ ಕಲ್ಮಾಡಿ, ಪುಣೆ ಬಂಟರ ಸಂಘದ ಟ್ರಸ್ಟಿ ದಯಾ ಶಂಕರ್ ಶೆಟ್ಟಿ ಆಗಮಿಸಲಿದ್ದಾರೆ.
ಬಂಟ ಕ್ರೀಡಾ ರತ್ನ ಪ್ರಶಸ್ತಿಯನ್ನು ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ನ ಸಿ.ಎಂ.ಡಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಕೆ ಶೆಟ್ಟಿ ಹಾಗೂ ಗ್ರಾಮೀಣ ಕ್ರೀಡಾ ಪ್ರಶಸ್ತಿಯನ್ನು ಗಂಧರ್ವ ಗ್ರೂಪ್ ಆಫ್ ಹೋಟೆಲ್ ನ ಸಿ.ಎಂ.ಡಿ, ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿಯವರು ಪ್ರದಾನಿಸಲಿದ್ದಾರೆ. ಕ್ರೀಡಾಕೂಟದ ದ್ವಜಾರೋಹಣವನ್ನು ಯು.ಎ.ಇ ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ವಕ್ವಾಡಿ ಮಾಡಲಿದ್ದು, ಪಥ ಸಂಚಲನೆಯ ಉದ್ಘಾಟನೆಯನ್ನು ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾಡಲಿದ್ದಾರೆ. ಪುಣೆ ಬಂಟರ ಸಂಘದ ಟ್ರಸ್ಟಿ ಕರುಣಾಕರ್ ಶೆಟ್ಟಿ ಸಮುದ್ರ ವಾಲಿಬಾಲ್ ಕೋರ್ಟ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಕಬಡ್ಡಿ ಕೋರ್ಟ್, ಅಹಮದ್ ನಗರದ ಶಬರಿ ಹಾಸ್ಪಿಟಾಲಿಟಿ ಸರ್ವಿಸಸ್ ಪೈ ಲಿಮಿಟೆಡ್ ನ ಸಿ.ಎಂ.ಡಿ ಕೆ.ಕೆ ಶೆಟ್ಟಿಯವರು ತ್ರೋಬಾಲ್ ಕೋರ್ಟ್ ಹಾಗೂ ಪುಣೆ ಬಂಟರ ಸಂಘದ ಟ್ರಸ್ಟಿ, ಆಶೀರ್ವಾದ್ ಹೋಟೆಲ್ ನ ಮಾಧವ ಶೆಟ್ಟಿಯವರು ಹಗ್ಗಜಗ್ಗಾಟ ಪಂದ್ಯಾಟದ ಉದ್ಘಾಟನೆ ಮಾಡಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿ.ಎ ಸದಾನಂದ ಶೆಟ್ಟಿ, ಕರ್ನಾಟಕ ಮಿಲ್ಕ್ ಫೆಡರೇಶನ್ ನ ಮಾಜಿ ಅಧ್ಯಕ್ಷ ದಿವಾಕರ್ ಶೆಟ್ಟಿ ಕಾಪು, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಕರ್ನಿರೆ, ಪುಣೆ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಉಡುಪಿಯ ಖ್ಯಾತ ವಕೀಲರಾದ ಉಮೇಶ್ ಶೆಟ್ಟಿ ಕಳತ್ತೂರು, ಮುಂಬಯಿ ಸಿದ್ದಿ ವಿನಾಯಕ ದೇವಸ್ಥಾನದ ಟ್ರಸ್ಟಿ ಭಾಸ್ಕರ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಮಾಜಿ ನಗರ ಸೇವಕಿ ಸುಜಾತ ಎಸ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ್ ಶೆಟ್ಟಿ , ಪುಣೆ ರೆಸ್ಟೋರೆಂಟ್ ಆಂಡ್ ಹೊಟೇಲಿಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿ ಪ್ರಸಾದ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಉಡುಪಿ ಹೋಂ ಗಾರ್ಡ್ ನ ಕಮಾಂಡರ್ ಡಾ| ರೋಶನ್ ಕುಮಾರ್ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಮುಂಬಯಿ ಬಂಟ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಮಾವಲ್ ಲೋಕಸಭಾ ಸಂಸದ ಶ್ರೀರಂಗ ಬಾರ್ನೆ, ರಾಜ್ಯಸಭಾ ಸದಸ್ಯೆ ಮೇಧಾ ಕುಲಕರ್ಣಿ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಪುಣೆ ಕಂಟೋನ್ಮೆಂಟ್ ಶಾಸಕ ಸುನಿಲ್ ಕಾಂಬ್ಲೆ, ಕಡಕ್ವಾಸ್ಲ ಶಾಸಕ ಭೀಮರಾವ್ ತಾಪ್ಕಿರ್, ಭೋಸ್ರಿ ಶಾಸಕ ಮಹೇಶ್ ಲಾಂಡ್ಗೆ, ಪಿಂಪ್ರಿ ಶಾಸಕ ಅಣ್ಣಾ ಬನ್ಸ್ಸೋಡೆ, ವಡಗಾಂವ್ ಶೇರಿ ಶಾಸಕ ಬಾಪುಸಾಹೇಬ್ ಪಟಾರೆ, ಹಡಪ್ಸರ್ ಶಾಸಕ ಚೇತನ್ ತುಪೆ, ಶಿವಾಜಿ ನಗರ ಶಾಸಕ ಸಿದ್ಧಾರ್ಥ್ ಶಿರೋಳೆ, ಕಸ್ಬಾ ಶಾಸಕ ಹೇಮಂತ್ ರಸಾನೆ, ಚಿಂಚ್ವಾಡ್ ಶಾಸಕ ಶಂಕರ್ ಜಗತಾಪ್, ಮಹಾರಾಷ್ಟ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಕ್ರಾಂತ್ ಪಾಟೀಲ್, ಮಹಾರಾಷ್ಟ್ರ ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅನುಪ್ ಮೋರೆ, ಮಾಜಿ ಶಾಸಕ ವಿಲಾಸ್ ಲಾಂಡೆ, ಕರ್ನಾಟಕ ರಾಜ್ಯಸಭಾ ಸದಸ್ಯ ಮಂಜುನಾಥ್ ಭಂಡಾರಿ, ಬಂಟ್ವಾಳ ವಿಧಾನಸಭಾ ಶಾಸಕ ಉಳೆಪ್ಪಾಡಿ ಗುತ್ತು ರಾಜೇಶ್ ನ್ಯಾಕ್, ಮಂಗಳೂರು ಉತ್ತರ ವಿಧಾನಸಭಾ ಶಾಸಕ ಡಾ. ಭರತ್ ವೈ ಶೆಟ್ಟಿ, ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜಾ, ಕಾಪು ವಿಧಾನಸಭಾ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ವಿಧಾನಸಭಾ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಪುತ್ತೂರು ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ, ಭಿವಂಡಿ ರಾಜಕೀಯ ನೇತಾರ ಸಂತೋಷ್ ಎಂ ಶೆಟ್ಟಿ, ಸೂರ್ಯಕಾಂತ್ ಕಾಕಡೆ ಗ್ರೂಪ್ ಸಿ.ಎಂ.ಡಿ ಸೂರ್ಯಕಾಂತ್ ಕಾಕಡೆ, ಪುಣೆಯ ಖ್ಯಾತ ಆರ್ಕಿಟೆಕ್ಟ್ ಪ್ರಕಾಶ್ ಕುಲಕರ್ಣಿ, ಖ್ಯಾತ ಹೋಟೆಲ್ ಉದ್ಯಮಿ ಜವಾಹರ್ ಚೋರ್ಗೆ, ಮಹಾರಾಷ್ಟ್ರ ಹೌಸಿಂಗ್ ಕಾರ್ಪೋರೇಶನ್ ನ ನಿರ್ದೇಶಕ ಸುಶಿ ಕುಮಾರ್ ದೇಶ್ ಮುಖ್ ರವರು ಅಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಬಂಟ ಕ್ರೀಡಾ ರತ್ನ ಪ್ರಶಸ್ತಿಯನ್ನು ಶಿವ ಛತ್ರಪತಿ ಪ್ರಶಸ್ತಿ ವಿಜೇತ ಜಯ ಶೆಟ್ಟಿ ಮತ್ತು ಛಾಯಾ ಜೆ ಶೆಟ್ಟಿಯವರಿಗೆ ನೀಡಿ ಸನ್ಮಾನಿಸಲಾಗುವುದು. ಬಂಟ ಕ್ರೀಡಾ ಪ್ರಶಸ್ತಿಯನ್ನು ಪ್ರಶಾಂತ್ ರೈ [ಕಬಡ್ಡಿ ], ಶಿವಾನಿ ಶೆಟ್ಟಿ [ಸ್ಕೇಟಿಂಗ್], ಸುಯೇಶ್ ಅರ್ ಶೆಟ್ಟಿ [ಬಾಸ್ಕೆಟ್ ಬಾಲ್], ವೈಷ್ಣವಿ ವಿ ಶೆಟ್ಟಿ [ವೆಯಿಟ್ ಲಿಪ್ಟಿಂಗ್] ,ಶಿವಂ ಶೆಟ್ಟಿ [ಟೇಕ್ವಾಂಡೋ], ಸಂಸ್ಕ್ರಿತ್ ಎಸ್ ರೈ [ಸ್ಕೇಟಿಂಗ್ ] ರವರುಗಳಿಗೆ ಪ್ರದಾನಿಸಲಾಗುವುದು ಹಾಗೂ ಗ್ರಾಮೀಣ ಕ್ರೀಡಾ ಪ್ರಶಸ್ತಿಯನ್ನು ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದ ಮಾಳ ಶೇಖರ್ ಶೆಟ್ಟಿ ಮತ್ತು ಎರ್ಮಾಳ್ ಬಾಲಚಂದ್ರ ಶೆಟ್ಟಿಯವರು ಪಡೆಯಲಿದ್ದಾರೆ.
ವರದಿ : ಹರೀಶ್ ಮೂಡಬಿದಿರೆ