ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ನೂತನ ಸಂಚಾಲಕರಾಗಿ ಬೋಳ ಸದಾಶಿವ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 28ರಂದು ಸಹಕಾರ ಭಾರತಿಯ ರಾಜ್ಯಾಧ್ಯಕ್ಷರಾದ ಪ್ರಭುದೇವ ಆರ್ ಮಾಗನೂರ್ ಅವರು ಉಡುಪಿ ಕಿಸಾನ್ ಸಭಾ ಸಭಾಂಗಣದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಹಕಾರ ಭಾರತಿ ಕಾರ್ಯಕಾರಿಣಿಯಲ್ಲಿ ರಾಜ್ಯದ ಹಾಲು ಪ್ರಕೋಷ್ಠದ ನೂತನ ಸಂಚಾಲಕರಾಗಿ ಬೋಳ ಸದಾಶಿವ ಶೆಟ್ಟಿ ಅವರ ಆಯ್ಕೆಯನ್ನು ಘೋಷಿಸಿ ಜವಾಬ್ದಾರಿಯನ್ನು ನೀಡಿದರು. ಬೋಳ ಸದಾಶಿವ ಶೆಟ್ಟಿಯವರು ಕಳೆದ ಎರಡು ಅವಧಿಗಳಲ್ಲಿ ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಈ ಸಂದರ್ಭ ರಾಜ್ಯದ ನೂತನ ಪ್ರಧಾನ ಕಾರ್ಯದರ್ಶಿಗಳಾದ ಸಾಣೂರು ನರಸಿಂಹ ಕಾಮತ್, ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ, ರಾಜ್ಯ ಸಂಘಟನಾ ಪ್ರಮುಖರಾದ ಮಂಜುನಾಥ, ರಾಜ್ಯ ಮಹಿಳಾ ಪ್ರಮುಖರಾದ ವಿದ್ಯಾ ಪೈ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ ಎಸ್. ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ನಾಯಕ್ ಹಾಗೂ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.