ಮೂಡುಬಿದಿರೆ: ಚೊಚ್ಚಲ ವಿಶ್ವ ಧ್ಯಾನ ದಿನದ ಪ್ರಯುಕ್ತ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನವತಿಯಿಂದ ಧ್ಯಾನ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ಬಿ ತಲ್ಲಿಕೇರಿ ಹಾಗೂ ಗೌರವ ಅತಿಥಿಯಾಗಿ ಖ್ಯಾತ ಯೋಗ ಮತ್ತು ಜಲಚಿಕಿತ್ಸಕ ಡಾ ಗುಲಾಬ್ ರೈ ತೆವಾನಿ ಮತ್ತು ರಿಸರ್ಚ್ ಆಫೀಸರ್ ಡಾ ನಿತೇಶ್ ಆಗಮಿಸಿದ್ದರು.
ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ ವನಿತಾ ಎಸ್ ಶೆಟ್ಟಿ ಹಾಗೂ ಕಾಲೇಜಿನ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೨೦೦ ಕ್ಕೂ ಅಧಿಕ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಳ್ವಾಸ್ ಆರೋಗ್ಯಧಾಮದ ಸಾಧಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಭಟ್ಕರ್ ಸಾಕ್ಷಿ ಸಂಜು ನಿರೂಪಿಸಿದರು.