ಈ ಹಿಂದೆ ಯುಎಇಯಲ್ಲಿ ದಾಖಲೆ ಪ್ರದರ್ಶನ ಕಂಡ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ತಂಡ ಇದೀಗ ಮತ್ತೊಮ್ಮೆ ಕರವಾಳಿಯ ತುಳುವರ, ತುಳು ಅಭಿಮಾನಿಗಳ ಮನಸೂರಗೈಯುವ ಚಿತ್ರದೊಂದಿಗೆ ಅರಬ್ ದೇಶಕ್ಕೆ ಕಾಲಿರಿಸಿದ್ದಾರೆ. ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಎಂಬ ಕೌಟುಂಬಿಕ ನವಿರು ಹಾಸ್ಯಮಯ ಸನ್ನಿವೇಶದ ಮಾರ್ಮಿಕ ಚಿತ್ರ ವೀಕ್ಷಕರ ನಡುವೆ ಗಮನ ಸೆಳೆಯಲು ಸಜ್ಜಾಗಿದೆ. ಈ ಚಿತ್ರದ ಯುಎಇಯ ಪ್ರೀಮಿಯರ್ ಪ್ರದರ್ಶನದ ಪೊಸ್ಟರ್ ಬಿಡುಗಡೆ, ವಿಡಿಯೋ ಸಾಂಗ್ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 8 ರಂದು ದುಬೈಯ ಪ್ರತಿಷ್ಠಿತ ಹೊಟೇಲ್ ನಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಹರೀಶ್ ಬಂಗೆರ, ಆತ್ಮಾನಂದ ರೈ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ಉದ್ಯಮಿಗಳಾದ ಬು.ಅಬ್ದುಲ್ಲ, ಗುಣಶೀಲ್ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ, ಡಾ. ರಶ್ಮಿ, ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.
ಮಿಡ್ಲ್ ಕ್ಲಾಸ್ ಕುಟುಂಬದಿಂದ ನಾನು ಬಂದಿರುವ ಕಾರಣ ಈ ರೀತಿಯ ಟೈಟಲ್ ಇದ್ದ ಚಿತ್ರ ನೋಡುವ ಕಾತುರದಿಂದ ಇದ್ದೇನೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ದುಬೈಯ ಮಣ್ಣಿನಿಂದ ಉದ್ಘಟನೆಗೊಂಡು ಯಶಸ್ಸನ್ನು ಸಾದಿಸಿತೋ ಆ ರೀತಿ ಈ ಚಿತ್ರ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಿತ್ರವು ಸುಪರ್ ಹಿಟ್ ಆಗಿ ತುಳ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿ ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭವನ್ನು ಹಾರೈಸಿದರು.
ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಕರ್ನಾಟಕ ಸಂಘ ರಾಸ್ ಅಲ್ ಕೈಮಾದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಸಂಘಟಕ ನೋಯಲ್ ಅಲ್ಮೇಡಾ, ಶಾನ್ ಪೂಜಾರಿ, ದೇವಿ ಪ್ರಸಾದ್ ಶೆಟ್ಟಿ, ಪಟ್ಲ ಫೌಂಡೇಷನ್ ಯುಎಇಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು, ವಸಂತ್ ಶೆಟ್ಟಿ, ಮುಂಬಯಿಯ ಖ್ಯಾತ ಪತ್ರಕರ್ತ ರೋನ್ಸ್ ಬಂಟ್ವಾಳ, ಗಟ್ಟಿ ಸಮಾಜದ ವರದರಾಜ್ ಶೆಟ್ಟಿಗಾರ್, ರಾಜೇಶ್ ಕುತ್ತರ್, ಪ್ರಕಾಶ್ ಪಕ್ಕಳ, ದೀಪಕ್ ಪಾಲಡ್ಕ ಉಪಸ್ಥಿತರಿದ್ದರು. ಚಿತ್ರದ ವೀಡಿಯೋ ಹಾಡನ್ನು ನೋಡಿದ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದರು.
ಚಿತ್ರದ ಪ್ರೀಮಿಯರ್ ಪ್ರದರ್ಶನದ ಪಾಸ್ ಗಳನ್ನು ಯುಎಇಯ ಚಿತ್ರದ ಪ್ರೇಸೆಂಟರಾದ ಶ್ರೀಮತಿ ಮೋನಿಷ ಶರತ್ ಶೆಟ್ಟಿ, ಹರೀಶ್ ಬಂಗೇರ, ಹರೀಶ್ ಶೇರಿಗಾರ್, ಗಿರೀಶ್ ನಾರಯಣ್, ದೀಪಕ್ ಕುಮಾರ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಅಶೋಕ್ ಬೈಲೂರು, ದಯಾ ಕಿರೋಡಿಯನ್, ವಿನೋದ್ ಉಳ್ಳಾಲ್, ದಯಾನಂದ ಹೆಬ್ಬಾರ್, ಸತೀಶ್ ಉಳ್ಳಾಲ್, ವಾಸು ಕುಮಾರ್ ಶೆಟ್ಟಿ, ಮಲ್ಲಿಕಾರ್ಜುನ ಗೌಡ, ನಾಗರಾಜ ರಾವ್ ಉಡುಪಿ, ಪ್ರಜ್ವಲ್ ಶೆಟ್ಟಿ, ಯಕ್ಷ ಮಿತ್ರರು ದುಬೈಯ ಜಯಂತ್ ಶೆಟ್ಟಿ, ತುಳು ಪಾತೆರ್ಗ ತುಳು ಒರಿಪಾಗದ ರಿತೇಶ್ ಅಂಚನ್, ಶ್ರೀಮತಿ ಲವೀನ ಫರ್ನಾಂಡೀಸ್, ಪೀಟರ್ ಜಾಯ್ಸನ್, ಭರತ್ ರಾಮ್, ಸಂತೋಷ್ ಶೆಟ್ಟಿ ಪೊಳಲಿ ಉಪಸ್ಥಿತರಿದ್ದರು.
ಊರಿಂದ ಆಗಮಿಸಿದ ಚಿತ್ರದ ನಾಯಕ ವಿನೀತ್ ಕುಮಾರ್, ನಾಯಕಿ ಸಮತಾ ಅಮೀನ್, ನಿರ್ದೇಶಕ ರಾಹುಲ್ ಅಮೀನ್, ನಿರ್ಮಾಪಕ ಆನಂದ ಕುಂಪಲ, ಸಹ ನಿರ್ಮಾಪಕ ನಿತೀನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಕಲಾ ನಿರ್ದೇಶಕ ಪವನ್ ಕುಮಾರ್ ಶೆಟ್ಟಿ ಹಾಗೂ ಯುಎಇಯ ಚಿತ್ರದ ಸಹ ನಿರ್ಮಾಪಕರಾದ ಮಿತ್ರಂಪಾಡಿ ಜಯರಾಮ ರೈ, ಸ್ವಸ್ತಿಕ್ ಆಚಾರ್ಯರವರು ಯುಎಇಯಲ್ಲಿ ಇರುವ ಎಲ್ಲಾ ತುಳುವರು ಈ ಚಿತ್ರವನ್ನು ನೋಡಿ ಚಿತ್ರದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಿದರು. ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ನೃತ್ಯ ಕಾರ್ಯಕ್ರಮ ಮತ್ತು ಯುಎಇಯ ಪ್ರಸಿದ್ಧ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು. ನಟ ವಿನೀತ್ ಕುಮಾರ್, ಗಿರೀಶ್ ನಾರಯಣ್ ಮತ್ತು ಸ್ವಸ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಹುಲ್ ಅಮೀನ್ ಧನ್ಯವಾದವಿತ್ತರು.
ನಟ ರಾಹುಲ್ ಅಮೀನ್ ನಿರ್ದೇಶನದ ಈ ಚಿತ್ರದ ಪ್ರೀಮಿಯರ್ ಪ್ರದರ್ಶನವು ಜನವರಿ 18 ಮತ್ತು 19ರಂದು ಯುಎಇಯ ಅಬುಧಾಬಿ, ರಾಸ್ ಅಲ್ ಕೈಮಾ, ದುಬೈ, ಶಾರ್ಜಾದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್ ಅಮೀನ್ ವಿನೀತ್ ಕುಮಾರ್ ಜೊತೆಯಾಗಿ ಈ ಚಿತ್ರದ ಮೂಲಕ ಚಿತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ. ವಿನೀತ್ ಕುಮಾರ್ ಗೆ ನಾಯಕಿಯಾಗಿ ಸಮತಾ ಅಮೀನ್ ಅಭಿನಯಿಸಿದ್ದಾರೆ. ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ, ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುಎಇಯ ಹೆಸರಾಂತ ನಾಟಕ ತಂಡ ಗಮ್ಮತ್ ಕಲಾವಿದೆರ್ ಯುಎಇಯ ಕಲಾವಿದರು ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂಡದ ಚಿದಾನಂದ ಪೂಜಾರಿ ವಾಮಂಜೂರು, ಆಶಾ ಕೊರೇಯ, ಗಿರೀಶ್ ನಾರಾಯಣ್, ಡೊನಿ ಕೊರೇಯ, ದೀಪ್ತಿ ದಿನ್ ರಾಜ್, ಕಿರಣ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ.
ಚಿತ್ರ, ಬರಹ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ