ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ನಡೆಯುವ 12ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 8 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಲೇನ್ ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಜರಗಲಿದೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪುಣೆ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಪುಣೆ ನಗರ ಶಿವಸೇನಾ ಅಧ್ಯಕ್ಷರಾದ ಪ್ರಮೋದ್ ಅಲಿಯಾಸ್ ನಾನಾ ಭಂಗಿರೆರವರು ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಪುಣೆಯ ಖ್ಯಾತ ಉದ್ಯಮಿ ಮಂಜುನಾಥ್ ಸಿ ಶೆಟ್ಟಿಯವರು ಉಪಸ್ಥಿತರಿರುವರು.
ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷರಾದ ರಕ್ಷಿತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪಧಾದಿಕಾರಿಗಳ ಸಹಕಾರದೊಂದಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿವಿಧ ವಯೋಮಿತಿಯ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಬಹುದು. ವಿಶೇಷ ಆಕರ್ಷಣೆಯಾಗಿ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟದ ಸ್ಪರ್ಧೆ ನಡೆಯಲಿದೆ.
ಕ್ರೀಡಾ ಕೂಟದ ದೀಪ ಪ್ರಜ್ವಲನೆ, ಉದ್ಘಾಟನೆ ಮತ್ತು ಕ್ರೀಡಾ ಜ್ಯೋತಿಯ ಆಗಮನ ಹಾಗೂ ಪಥ ಸಂಚಲನಾ ಕಾರ್ಯಕ್ರಮವು ಕ್ಲಪ್ತ ಸಮಯದಲ್ಲಿ ನಡೆಯಲಿರುವುದರಿಂದ ಕ್ರೀಡಾ ಸ್ಪರ್ಧಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಅಗಮಿಸಿ ಸಹಕರಿಸಬೇಕೆಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕ್ರೀಡಾ ಕಾರ್ಯಾಧ್ಯಕ್ಷೆ ಪೂರ್ಣಿಮಾ ಶೆಟ್ಟಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪುಣೆ ಬಂಟ್ಸ್ ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ [9168683538] ಯವರನ್ನು ಸಂಪರ್ಕಿಸಬಹುದು.
ವರದಿ : ಹರೀಶ್ ಮೂಡಬಿದಿರೆ ಪುಣೆ