ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ವತಿಯಿಂದ ‘ನಂದಾದೀಪ ಸಂದೀಪ’ ವಿಶೇಷ ಕಾರ್ಯಕ್ರಮವು ಜುಲೈ 14 ರಂದು ಬೆಳಗ್ಗೆ 10 ರಿಂದ ಅಪರಾಹ್ನ 1 ರ ವರೆಗೆ ಬೆಂಗಳೂರಿನಲ್ಲಿರುವ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮನೆಯಲ್ಲಿ ನಡೆಯಲಿದೆ.
ದೇಶಕ್ಕೋಸ್ಕರ ಬಲಿದಾನಗೈದವರನ್ನು ಸ್ಮರಿಸುವ ಉದ್ದೇಶದಿಂದ ಸಂದೀಪ ನೀನು ನಮ್ಮ ಆತ್ಮಸ್ಥೈರ್ಯದ ನಂದಾದೀಪ ಎಂದು ಆ ಧೀರನ ಮನೆಯಲ್ಲಿ ಹೆತ್ತವರ ಧ್ವನಿಗೆ ನಮ್ಮ ಧ್ವನಿ ಬೆಸೆಯುವ ಕಾರ್ಯಕ್ರಮವನ್ನು ಐಲೇಸಾ ಹಮ್ಮಿಕೊಳ್ಳಲು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳಾದ ಅತ್ರಾಡಿ ಸುರೇಶ್ ಹೆಗ್ಡೆ ಮತ್ತು ರಮೇಶ್ ಬಿ. ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಹಿತಿಗಳು, ಮಿಲಿಟರಿಯವರು, ಶ್ರೇಷ್ಠ ಹಾಡುಗಾರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅನಂತ್ ರಾವ್ (9686321393), ಸೂರಿ ಮಾರ್ನಾಡ್ (9324280156), ಶಾಂತಾರಾಮ್ ಶೆಟ್ಟಿ (9916129570) ಅವರನ್ನು ಸಂಪರ್ಕಿಸುವಂತೆ ಟೀಮ್ ಐಲೇಸಾ ವಕ್ತಾರ ಸುರೇಂದ್ರ ಶೆಟ್ಟಿ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Previous Articleಸುರತ್ಕಲ್ ಡಾ ಜಿ ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ನಿಧನ
Next Article ಕಿನ್ನಿಗೋಳಿ ರೋಟರಿಯ ವಲಯ ಸಹಾಯಕ ಗವರ್ನರ್ ಆಗಿ ಶರತ್ ಶೆಟ್ಟಿ