ಯೋಗ ನಮ್ಮ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಒಂದು ಅಂಗ ಮತ್ತು ಪುರಾತನ ಕಾಲದಿಂದ ಬಹಳ ಅಭಿವೃದ್ದಿ ಪಥದಲ್ಲಿ ನಡೆದು ಬಂದಿರುವ ಕಲೆ. ಮನಸ್ಸು ಮತ್ತು ದೇಹವನ್ನು ಒಂದಕ್ಕೊಂದು ಸಂಪರ್ಕಿಸುವ ಪ್ರಾಚೀನ ಕಲೆ. ಪ್ರತಿನಿತ್ಯ ಯೋಗದಿಂದ ನಮ್ಮ ದೇಹ ಸದೃಡಗೊಳ್ಳಬಹುದು ಮತ್ತು ಏಕಾಗ್ರತೆಯಿಂದ ಮನಸ್ಸಿಗೆ ಶಾಂತಿಯನ್ನು ಪಡೆಯಬಹುದು. ಸ್ಥಿರ ಉತ್ತಮ ಅರೋಗ್ಯ ಪಡಯಲು ಯೋಗ ಬಹು ಮುಖ್ಯ ಸಾಧನ. ಯೋಗ ದೇಹಕ್ಕೆ ರೋಗ ನೀರೋಧಕ ಶಕ್ತಿಯನ್ನು ನೀಡುತ್ತದೆ. ಯೋಗದಲ್ಲಿ ನಾವೆಲ್ಲರೂ ಜ್ಞಾನ ಪಡೆದಂತೆ ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಯೋಗದ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ. ಯೋಗದಿಂದ ಅರೋಗ್ಯ ಭಾಗ್ಯ ಪಡೆಯಬಹುದು ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರ್ ನುಡಿದರು.
ಪುಣೆ ಬಂಟ್ಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ಶುಕ್ರವಾರದಂದು ವಾನ್ ವಾಡಿಯ ಮಹಾತ್ಮ ಪುಲೆ ಸಾಂಸ್ಕ್ರತಿಕ ಭವನದಲ್ಲಿ ಭಾರತೀಯ ಯೋಗ ಸಂಸ್ಥಾನ ಪುಣೆ ವಿಭಾಗದ ಮುಖ್ಯಸ್ಥರಾದ ಕೆಮ್ತೂರು ಸುಧಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಯೋಗ ದಿನಾಚಾರಣೆ ನಡೆಯಿತು. ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಗರ ಸೇವಕಿ ಕಾಳಿಂದ ಮುರಲೀಧರ್ ಪುಂಡೆ ಮತ್ತು ಲಕ್ಷ ಪ್ರತಿಷ್ಠಾನದ ಅಧ್ಯಕ್ಷ ಮಹೇಶ್ ಮುರಳಿಧರ ಪುಂಡೆ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷರು, ಅತಿಥಿಗಳು, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು, ಭಾರತೀಯ ಯೋಗ ಸಂಸ್ಥಾನ ಪುಣೆ ವಿಭಾಗದ ಸದಸ್ಯರು ಸೇರಿ ದೀಪ ಪ್ರಜ್ವಲಿಸಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಶ್ರೀಮತಿ ಲತಾ ಎಸ್ ಶೆಟ್ಟಿ ಪ್ರಾರ್ಥನೆಗೈದರು. ಪ್ರಧಾನ ಕಾರ್ಯದರ್ಶಿ ಅರವಿಂದ್ ರೈ ಸ್ವಾಗತಿಸಿದರು.
ಸಂಘದ ಜೊತೆ ಕಾರ್ಯದರ್ಶಿ ಕೆಮ್ತೂರು ಸುಧಾಕರ್ ಶೆಟ್ಟಿಯವರು ಮಾತನಾಡಿ, ಯೋಗ ಮತ್ತು ಯೋಗ ಮಾಡುವುದರಿಂದ ಶಾರೀರಿಕ ಮತ್ತು ಮಾನಸಿಕ ಸ್ವಸ್ಥತೆಗೆ ರಾಜಮಾರ್ಗ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗ. ಪ್ರತೀ ದಿನ ಯೋಗ ಮಾಡುವುದರಿಂದ ನಮ್ಮ ನಮ್ಮ ಜೀವನ ಶೈಲಿಯನ್ನು ಕೂಡಾ ಪರಿವರ್ತಿಸುವಲ್ಲಿ ಸಹಕರಿಸುತ್ತದೆ ಎಂದು ಯೋಗದ ಬಗ್ಗೆ ತಿಳಿಸಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪುಣೆ ಬಂಟ್ಸ್ ಅಸೋಸಿಯೇಷನ್ ನ ಪ್ರಮುಖರಾದ ಮಾಜಿ ಅಧ್ಯಕ್ಷರುಗಳಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ಆನಂದ್ ಶೆಟ್ಟಿ ಮಿಯ್ಯಾರ್, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜೊತೆ ಕೋಶಾಧಿಕಾರಿ ರವೀಂದ್ರ ಎನ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿ ಮತ್ತು ಪಧಾಧಿಕಾರಿಗಳು, ಮಹಿಳಾ ವಿಭಾಗದ ಪ್ರಮುಖರಾದ ಮಾಜಿ ಅಧ್ಯಕ್ಷರುಗಳಾದ ಸುಜಾತಾ ಎಸ್.ಹೆಗ್ಡೆ, ಸುಧಾ ಎನ್.ಶೆಟ್ಟಿ, ಮಲ್ಲಿಕಾ ಎ ಶೆಟ್ಟಿ, ದೀಪಾ ಎ ರೈ, ಕಾರ್ಯದರ್ಶಿ ಲತಾ ಎಸ್.ಶೆಟ್ಟಿ, ಕೋಶಾಧಿಕಾರಿ ಪ್ರಸಾಧಿನಿ ಎಸ್ ಶೆಟ್ಟಿ, ಸಾಂಸ್ಕ್ರತಿಕ ಜೊತೆ ಕಾರ್ಯದರ್ಶಿ ಶಾಲಿನಿ ಎಂ ಶೆಟ್ಟಿ, ಯುವ ವಿಭಾಗದ ಪ್ರಮುಖರಾದ ನಿಖಿಲ್ ಎನ್ ಶೆಟ್ಟಿ, ಅದೀಪ್ ಶೆಟ್ಟಿ, ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಯೋಗಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅರವಿಂದ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ ವರದಿ : ಹರೀಶ್ ಮೂಡಬಿದ್ರಿ