ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಮತ್ತು ಆಯೋಜನೆಯಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿಶ್ವ ಯೋಗ ದಿನ ನಿಮಿತ್ತ ಯೋಗ ಗುರುಗಳ ಯೋಗ್ಯ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಜೂನ್ 21 ರಂದು ಶುಕ್ರವಾರ ಬೆಳಿಗ್ಗೆ ಪನ್ವೇಲ್ ನ ಜ್ಞಾನಮಯಿ ಮಾಧ್ಯಮಿಕ ವಿದ್ಯಾಲಯದಲ್ಲಿ ಜರಗಲಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ದಕ್ಷಿಣ್ ಇವರ ಮುಂದಾಳತ್ವದಲ್ಲಿ ಜರಗಲಿರುವ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ನೆರವೇರಲಿರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪನ್ವೇಲ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಮಾಜಿ ಸಭಾಪತಿ, ನಗರ ಸೇವಕ ಸಂತೋಷ್ ಜಿ. ಶೆಟ್ಟಿಯವರು ಹಾಗೂ ಗೌರವ ಅತಿಥಿಯಾಗಿ ಪನ್ವೇಲ್ ನ ಮಾಜಿ ನಗರ ಸೇವಕಿ ಅನಿತಾ ಎಸ್. ಶೆಟ್ಟಿಯವರು ಉಪಸ್ಥಿತರಿರುವರು.
ಈ ಕಾರ್ಯಕ್ರಮದ ನಿಮಿತ್ತ ಸಮಾಜ ಬಾಂಧವರಿಗೆ ಬರಲು ಅನುಕೂಲವಾಗುವ ನೆಲೆಯಲ್ಲಿ ನೆರೂಳ್ ನ ಶ್ರೀ ಶನೀಶ್ವರ ಮಂದಿರರ ಬಳಿಯಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆಯೇ ಕಾರ್ಯಕ್ರಮಕ್ಕೆ ನೇರವಾಗಿ ಬರುವವರು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ನ್ಯೂ ಪನ್ವೇಲ್ ನ ಪದ್ಮ ಹೋಟೆಲು ಬಳಿ ಬಂದು ಸೇರುವಂತೆ ವಿನಂತಿಸಿಕೊಳ್ಳಲಾಗಿದೆ.
ಈ ಎರಡೂ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ಸಮಾಜ ಬಾಂಧವರು ಬಂದು ಸಹಕರಿಸುವಂತೆ ಬಂಟರ ಸಂಘ ಮುಂಬಯಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ದಕ್ಷಿಣ್ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷೆ ಕುಮಾರಿ ಯಶಿಕಾ ಡಿ. ಶೆಟ್ಟಿ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯವರು, ಮಾಜಿ ಕಾರ್ಯಾಧ್ಯಕ್ಷರುಗಳು, ಉಪ ಸಮಿತಿಯ ಕಾರ್ಯಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.