ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕರಾದ ಅನಿತಾ ರವಿಶಂಕರ್ ರಾವ್, ಕೋಶಾಧಿಕಾರಿಯಾಗಿ ಮಾಜಿ ಸೈನಿಕರಾದ ಜೆ.ಪಿ.ರೈ ಮುನ್ನೂರು ಇವರು ಆಯ್ಕೆಯಾಗಿದ್ದಾರೆ.
ಸೌಮ್ಯ ಆರ್ ಶೆಟ್ಟಿಯವರು ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ, ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ರವೀಂದ್ರ ಕೆ ಶೆಟ್ಟಿ ಉಳಿದೊಟ್ಟು ಅವರ ಧರ್ಮಪತ್ನಿ.