ವಿಜಯ್ ಕುಮಾರ್ ಶೆಟ್ಟಿಯವರು ಕಲಾ ಕ್ಷೇತ್ರದ ಅಭಿನಯ ಚಕ್ರವರ್ತಿ, ಬಂಟ ಸಮಾಜದ ಹೆಮ್ಮೆಯ ಕಲಾವಿದ, ಅದ್ಭುತ ಸಾಧಕ, ಗೌರವಾನ್ವಿತ ವ್ಯಕ್ತಿತ್ವದ, ಬಹುಮುಖ ಪ್ರತಿಭೆಯ ವಿಜಯ್ ಕುಮಾರ್ ಶೆಟ್ಟಿ ಅವರ ಕಲಾ ಜೀವನ ಚರಿತ್ರೆ, ಸಾಧನೆ ಬಗ್ಗೆ ಸಾಕ್ಷ್ಯ ಚಿತ್ರವನ್ನು ಮಾಡುವ ದೊಡ್ಡ ಆಶಯವನ್ನು ನಾನು ಹೊಂದಿದ್ದೇನೆ. ಅದನ್ನು ಶೀಘ್ರದಲ್ಲಿ ಮಾಡುವ ಭರವಸೆಯನ್ನು ನಿಮಗೆ ನೀಡುತ್ತಿದ್ದೇನೆ. ನೂತನ ವಿಶ್ವ ದಾಖಲೆಯತ್ತ ಹೆಜ್ಜೆಯನ್ನಿಡುತ್ತಿರುವ ವಿಜಯ್ ಕುಮಾರ್ ಶೆಟ್ಟಿ ಅವರು ಕಲಾ ಕ್ಷೇತ್ರದಲ್ಲಿ ಸಾಧನೆಯ ಶಿಖರವನ್ನೇರಲಿ. ಕಲಾ ಸೇವೆಯಲ್ಲಿ ಕಲಾ ಜಗತ್ತು ಮತ್ತಷ್ಟು ಕೀರ್ತಿಯನ್ನು ಹೊಂದಲಿ ಎಂದು ಉದ್ಯಮಿ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರಾಜೇಂದ್ರ ವಿ. ಶೆಟ್ಟಿ ನುಡಿದರು. ಅವರು ಮಾರ್ಚ್ 28 ರಂದು ಡೊಂಬಿವಲಿ ಪೂರ್ವದ ಸಾವಿತ್ರಿಬಾಯಿ ಪುಲೆ ಸಭಾಗೃಹದಲ್ಲಿ ಕಲಾ ಜಗತ್ತು ಕ್ರಿಯೇಷನ್ಸ್ ಇವರ ಕಲೋತ್ಸವ ವಿಜಯೋತ್ಸವದ ನಾಲ್ಕನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಶೆಟ್ಟಿ ಎಕ್ಕಾರ್, ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿ ಮತ್ತು ಸುಷ್ಮಾ ಶೆಟ್ಟಿ ದಂಪತಿ, ಹೋಟೆಲ್ ಉದ್ಯಮಿ ವಿಠಲ್ ಎ. ಶೆಟ್ಟಿ ಮತ್ತು ವಿಮಲಾ ಶೆಟ್ಟಿ ದಂಪತಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್ ಮತ್ತು ಗೀತಾ ಮೆಂಡನ್ ದಂಪತಿ, ಬಂಟರ ಸಂಘ ಮುಂಬಯಿ ಭಿವಂಡಿ – ಬದ್ಲಾಪುರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಎಚ್ ಶೆಟ್ಟಿ, ಕಲಾಜಗತ್ತು ಕಲಾವಿದ ಅಶೋಕ್ ಶೆಟ್ಟಿ ಮುಂಡ್ಕೂರು ಮತ್ತು ಅನಿತಾ ಶೆಟ್ಟಿ ದಂಪತಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಪಾಲನ್ ಅವರ ಪರವಾಗಿ ತಾಯಿ ಗಿರಿಜಾ ಸಂಜೀವ ಪಾಲನ್ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಆನಂದ್ ಶೆಟ್ಟಿ ಎಕ್ಕಾರ್ ರವರು ಮಾತನಾಡಿ, ವಿಜಯ್ ಕುಮಾರ್ ಶೆಟ್ಟಿ ಅವರು ಕಲಾ ಕ್ಷೇತ್ರದಲ್ಲಿ ವಿಭಿನ್ನವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುವರು. ಈಗಾಗಲೇ ಅವರು ನಟನೆಯಲ್ಲಿ ಲಿಮ್ಕಾ ಬುಕ್ ಆಫ್ ದಾಖಲೆಯನ್ನು ರಚಿಸಿದ್ದಾರೆ. ಗಿನ್ನಿಸ್ ದಾಖಲೆ ಮಾಡುಲು ಪ್ರಯತ್ನಶೀಲರಾಗಿದ್ದಾರೆ. ಇದರಲ್ಲಿ ಅವರು ಜಯಶಾಲಿಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ ಎಂದರು. ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿಯವರು ಮಾತನಾಡಿ, ನಾನೋರ್ವ ಕಲಾ ಜಗತ್ತು ಸಂಸ್ಥೆಯ ಅಭಿಮಾನಿಯಾಗಿ ಆರಂಭದಿಂದಲೂ ಅದರ ಜೊತೆಗಿದ್ದೇನೆ. ಈ ಕಲಾ ಜಗತ್ತು ಸಂಸ್ಥೆಯ ರೂವಾರಿ ವಿಜಯ್ ಕುಮಾರ್ ಶೆಟ್ಟಿ ಓರ್ವ ವ್ಯಕ್ತಿಯಲ್ಲ, ಅವರೋರ್ವ ಶಕ್ತಿ. ಕಲಾ ಸಂಘಟನೆ ಹಾಗೂ ಅದ್ಭುತ ಪ್ರತಿಭೆಯ ಮೂಲಕ ಕಲಾ ಜಗತ್ತು ಸಂಸ್ಥೆಯನ್ನು ಬಹಳ ಎತ್ತರದ ಮಟ್ಟಕ್ಕೆ ಅವರು ಬೆಳೆಸಿದ್ದಾರೆ. ಕಳೆದ ನಾಲ್ಕುವರೆ ದಶಕಗಳಲ್ಲಿ ಅಪಾರ ಕಲಾವಿದರನ್ನು ಕಲಾಕ್ಷೇತ್ರಕ್ಕೆ ನೀಡಿದವರಾಗಿದ್ದಾರೆ. ಅಲ್ಲದೇ ಉತ್ತಮ ಸಂದೇಶ ಸಾರುವ, ಹಾಸ್ಯಮಯ ನಾಟಕವನ್ನು ಕಲಾಕ್ಷೇತ್ರಕ್ಕೆ ಅರ್ಪಿಸಿದವರಾಗಿದ್ದಾರೆ. ವಿಜಯ್ ಕುಮಾರ್ ಶೆಟ್ಟಿ ಅವರಿಂದ ಮತ್ತಷ್ಟು ಉತ್ತಮ ನಾಟಕಗಳು ಪ್ರದರ್ಶನಗೊಳ್ಳಲಿ ಎಂದ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿಯವರು ಕಳೆದ 30 ವರ್ಷಗಳಿಂದ ನಾನು ಮಾಡುತ್ತಿರುವ ಸಮಾಜ ಪರ ಸೇವೆಯನ್ನು ಗುರುತಿಸಿ ನನಗೆ ಡಾಕ್ಟರೇಟ್ ಗೌರವವನ್ನು ನೀಡಲಾಗಿದೆ. ಇದು ನನ್ನ ಡೊಂಬಿವಲಿ ಪರಿಸರದ ತುಳು- ಕನ್ನಡಿಗರಿಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ ಎಂದರು.
ಸನ್ಮಾನವನ್ನು ಸ್ವೀಕರಿಸಿ ಹಿರಿಯ ಹೋಟೆಲ್ ಉದ್ಯಮಿ ವಿಠಲ್ ಶೆಟ್ಟಿಯವರು ಮಾತನಾಡಿ, ವಿಜಯ್ ಕುಮಾರ್ ಶೆಟ್ಟಿಯವರು ಕಲಾ ಮಾತೆಯ ಆರಾಧಕರು. ಕಲಾ ಕ್ಷೇತ್ರಕ್ಕೆ ಕಲಾ ಜಗತ್ತು ಸಂಸ್ಥೆಯ ಕೊಡುಗೆ ಅನನ್ಯ. ಕಲಾ ಜಗತ್ತು ಸಂಸ್ಥೆಯ ಎಲ್ಲಾ ಕಲಾವಿದರನ್ನು ಅಭಿನಂದಿಸುತ್ತೇನೆ. ನಮ್ಮ ಭಾಷೆ, ಸಂಸ್ಕೃತಿ, ಕಲೆಯ ಉನ್ನತಿ ಆಗಬೇಕಾದರೆ ನಾಟಕಗಳು ಪ್ರದರ್ಶನಗೊಳ್ಳುತ್ತಿರಬೇಕು. ಉತ್ತಮ ನಾಟಕಗಳ ಮುಖಾಂತರ ಕಲಾ ಜಗತ್ತು ಕಲಾಭಿಮಾನಿಗಳ ಮನರಂಜಿಸಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧಕ್ಷ ಶೇಖರ್ ಮೆಂಡನ್ ರವರು ಮಾತನಾಡಿ, ಕಲಾ ಜಗತ್ತುವಿನ ವಿಜಯ್ ಕುಮಾರ್ ಶೆಟ್ಟಿ ಅವರು ಹಮ್ಮಿಕೊಳ್ಳುತ್ತಿರುವ ಹೆಚ್ಚಿನ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಾ ಬಂದಿದ್ದೇನೆ. ಇಂದು ನನ್ನನ್ನು ಕಲಾ ಜಗತ್ತು ಸಂಸ್ಥೆ ಗುರುತಿಸಿ ಸನ್ಮಾನಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ವಿಜಯಕುಮಾರ್ ಶೆಟ್ಟಿ ಅವರಿಂದ ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಆಗಲಿ. ಅವರ ಎಲ್ಲಾ ಅಶೋತ್ತರಗಳು ಈಡೇರಲಿ ಎಂದರು.
ಸನ್ಮಾನವನ್ನು ಸ್ವೀಕರಿಸಿ ಕಲಾ ಜಗತ್ತು ಸಂಸ್ಥೆಯ ಕಲಾವಿದ ಅಶೋಕ್ ಶೆಟ್ಟಿ ಮುಂಡ್ಕೂರುರವರು ಮಾತನಾಡಿ, ಕಳೆದ 45 ವರ್ಷಗಳಿಂದ ಕಲಾ ಜಗತ್ತು ಕಲಾ ಸೇವೆಯನ್ನು ಮಾಡುತ್ತಾ ಬಂದಿದೆ. ಕಲಾ ಜಗತ್ತು ಸಂಸ್ಥೆಯ ರಜತ ಮಹೋತ್ಸವ ಸಂದರ್ಭದಲ್ಲಿ ಚಿಣ್ಣರ ಬಿಂಬ ಸಂಸ್ಥೆಯನ್ನು ಕೂಡ ವಿಜಯ್ ಕುಮಾರ್ ಶೆಟ್ಟಿ ಅವರು ಹುಟ್ಟು ಹಾಕಿದರು. ಪ್ರಸ್ತುತ ಕಲಾ ಜಗತ್ತು ಹಾಗೂ ಚಿಣ್ಣರ ಬಿಂಬವು ಹಲವಾರು ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸಿ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎನ್ನಲು ಸಂತೋಷವಾಗುತ್ತದೆ. ಕಳೆದ 39 ವರ್ಷಗಳಿಂದ ಕಲಾವಿದನಾಗಿ ಕಲಾ ಜಗತ್ತು ಸಂಸ್ಥೆಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಅದ್ಬುತ ಪ್ರತಿಭಾವಂತರಾದ ವಿಜಯ ಶೆಟ್ಟಿಯವರಿಂದ ಕಲಾ ಕ್ಷೇತ್ರದಲ್ಲಿ ವಿಶೇಷ ದಾಖಲೆಗಳು ರಚನೆಯಾಗಲಿ. ಅವರ ಕಲೋತ್ಸವ- ವಿಜಯೋತ್ಸವ ಯಶಸ್ವಿಯಾಗಿ ನಡೆಯಲಿ ಎಂದರು. ಹಿರಿಯರಾದ ಗಿರಿಜಾ ಸಂಜೀವ ಪಾಲನ್ ರವರು ಸನ್ಮಾನವನ್ನು ಸ್ವೀಕರಿಸಿ ಕಲಾ ಜಗತ್ತು ಸಂಸ್ಥೆಗೆ ಶುಭವನ್ನು ಹಾರೈಸಿ ಕೃತಜ್ಞತೆಯನ್ನು ಸಲ್ಲಿಸಿದರು.
ಅಧ್ಯಕ್ಷ ಸ್ಥಾನದಿಂದ ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ಸುಕುಮಾರ್ ಶೆಟ್ಟಿಯವರು ಮಾತನಾಡಿ, ಮುಂದಿನ ನವೆಂಬರ್ ತಿಂಗಳಲ್ಲಿ ವಿಜಯ್ ಕುಮಾರ್ ಶೆಟ್ಟಿ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜರಗಲಿರುವ ಸಮಾರೋಪದಲ್ಲಿ ಕಲೋತ್ಸವ ಹಾಗೂ ವಿಜಯೋತ್ಸವ ವಿಜೃಂಭಣೆಯಿಂದ ನಡೆಯಲಿ ಎಂದರು. ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಧರ್ಮದರ್ಶಿ ಅಶೋಕ್ ಶೆಟ್ಟಿಯವರು ಮಾತನಾಡಿ, ವಿಜಯ್ ಕುಮಾರ್ ಶೆಟ್ಟಿ ಅವರು ತುಳುನಾಡಿನ ಓರ್ವ ಅಪ್ರತಿಮ ಕಲಾವಿದ. ಯಾವುದೇ ಪಾತ್ರವನ್ನು ನಿಭಾಯಿಸಬಲ್ಲ ಅದ್ಭುತ ಪ್ರತಿಭಾವಂತ. ಮುಂಬಯಿಗೆ ಕಂಬಳದ ಎತ್ತುಗಳನ್ನು ತರಿಸಿ ಇಲ್ಲಿ ಕಂಬಳದ ಪ್ರಾತ್ಯಕ್ಷಿತೆಯನ್ನ ಮಾಡಿ ತೋರಿಸಿದ ಕೀರ್ತಿ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಡೊಂಬಿವಲಿಯಲ್ಲಿ ಕೆಸರುಗದ್ದೆ ನಿರ್ಮಿಸಿ ನೇಜಿ ನೆಡುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಮುಂಬಯಿ ಮಹಾನಗರದಲ್ಲಿ ನಮ್ಮ ನಾಡಿನ ಕಲೆಯನ್ನು ಉನ್ನತಿ ಪಡಿಸುವ ಜೊತೆಗೆ ಸಂಸ್ಕೃತಿಯನ್ನು ಪಸರಿಸುವ ಕಾಯಕವನ್ನು ಮಾಡುತ್ತಾ ಬಂದಿದ್ದಾರೆ. ಕಲಾಕ್ಷೇತ್ರದಲ್ಲಿ ಅವರು ಸಾಧನೆಯೊಂದಿಗೆ ಕೀರ್ತಿವಂತರಾಗಿ ಬಾಳಲಿ ಎಂದರು.
ಉದ್ಯಮಿ ಮಂಜುನಾಥ ರೈಯವರು ಮಾತನಾಡಿ, ಕಲಾಕ್ಷೇತ್ರದಲ್ಲಿ ವಿಜಯಕುಮಾರ್ ಶೆಟ್ಟಿ ಅವರು ತನ್ನ ಹೆಸರು ಹಾಗೂ ಪ್ರತಿಭೆಗೆ ತಕ್ಕಂತೆ ಸದಾ ವಿಜಯಶಾಲಿಯಾಗುತ್ತಾರೆ. ಕಲಾವಿದರ ದೊಡ್ಡ ಸೇನೆಯನ್ನು ಕಟ್ಟಿಕೊಂಡು ಅವರು ಮಾಡಿತ್ತಿರುವ ಕಲಾ ಸೇವೆ ತುಂಬಾ ಶ್ಲಾಘನೀಯವಾದದ್ದು ಎಂದರು. ವೇದಿಕೆಯಲ್ಲಿ ಹೋಟೆಲ್ ಉದ್ಯಮಿ ರವಿ ಎಸ್ ಪೂಜಾರಿ, ಕರ್ನಾಟಕ ಸಂಘ ಡೊಂಬಿವಲಿ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಹೋಟೆಲ್ ಉದ್ಯಮಿ ರಮಾನಂದ ಶೆಟ್ಟಿ, ಭಂಡಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್. ಎನ್. ಭಂಡಾರಿ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸಲಹೆಗಾರ ರಾಜೀವ ಭಂಡಾರಿ, ಕಲಾ ಸಂಘಟಕ ಸಿವಿಲ್ ರಮೇಶ್ ಶೆಟ್ಟಿ, ಉದ್ಯಮಿ ಗೋಪಾಲ್ ಶೆಟ್ಟಿ, ಕಲಾಜಗತ್ತು ಸಂಸ್ಥೆಯ ಕೃಷ್ಣರಾಜ್ ಸುವರ್ಣ, ಜಗತ್ ಪಾಲ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಿಶೋರ್ ಶೆಟ್ಟಿ, ಹೇಮಂತ್ ಶೆಟ್ಟಿ, ಸುರೇಶ್ ಶೆಟ್ಟಿ, ಚಿನ್ಮಯ್ ಸಾಲ್ಯಾನ್ ನಿರೂಪಿಸಿದರು. ವೇದಿಕೆಯಲ್ಲಿ ವಿಜಯಕುಮಾರ್ ಶೆಟ್ಟಿ ಅವರು ತನ್ನಲ್ಲಿ ಅಡಕವಾಗಿರುವ ಪ್ರತಿಭೆಯನ್ನು ವಿವಿಧ ರೀತಿಯ ಪ್ರದರ್ಶನಗಳ ಮೂಲಕ ಪ್ರಚುರಪಡಿಸಿದರು. ಅವರು ಮೋಕೆದ ಜೋಕುಲು ನಾಟಕದಲ್ಲಿ ನಾಲ್ಕು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಕಲಾ ರಸಿಕರನ್ನು ಬೆರಗುಗೊಳಿಸಿದರು. ಅಲ್ಲದೇ ಭಾಗವತಿಕೆಯ ಮೂಲಕ ಎಲ್ಲರ ಮನರಂಜಿಸಿದರು. ಬಿಳಿ ಹಾಳೆಯಲ್ಲಿ ಅಕ್ಷರಗಳನ್ನು ತಿರುಗಿಸಿ ಬರೆದು ವಾಕ್ಯ ರಚನೆ, ನೆರಳು ಬೆಳಕಿನ ಮೂಲಕ ಮೊಲ ನಾಯಿ ಕುದುರೆ ಮೊದಲಾದ ಪ್ರಾಣಿಗಳನ್ನು ತೋರಿಸಿದರು. ಆ ಬಳಿಕ ಕಲಾ ಜಗತ್ತು ಕಲಾವಿದರಿಂದ ‘ಮೋಕೆದ ಜೋಕುಲು’ ಹಾಗೂ ‘ಪಗರಿದ ಮಂಚವು’ ನಾಟಕ ಪ್ರದರ್ಶನಗೊಂಡಿತು. ಕಲಾ ಜಗತ್ತು ಸಂಸ್ಥೆಯ ಉತ್ತಮ್ ಶೆಟ್ಟಿಗಾರ್, ಬಿ. ಎಸ್ ಪೈ, ದಿನೇಶ್ ಹೆಗ್ಡೆ, ಪೃಥ್ವಿರಾಜ್ ಮುಂಡ್ಕೂರು, ಸತೀಶ್ ಶೆಟ್ಟಿ ಡಾಲಿ, ದಯಾ ಚಂದ್ರಶೇಖರ್ ಶೆಟ್ಟಿ, ಉದಯ ಶೆಟ್ಟಿ, ಡೊಂಬಿವಲಿ ತುಳುಕೂಟದ ಎಲ್ಲಾ ಸದಸ್ಯರು ಸಹಕರಿಸಿದರು.