ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.9ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಉತ್ಸವ ಸಮಿತಿ ಗೌರವ ಅಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ಡಾ.ರವಿ ಶೆಟ್ಟಿ ನೇಸರ ಕಂಪ, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೂಡಂಬೈಲು ರವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ದೇವಳದ ವಠಾರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಜಯಪ್ರಸಾದ ಅಂಬಟ, ಉಮೇಶ್ ಗೌಡ ಗುತ್ತಿನಪಾಲು, ಶೇಷಪ್ಪ ಶೆಟ್ಟಿ ಪೋನೋಣಿ, ಗಣೇಶ್ ಗೌಡ ಪಜಿಮಣ್ಣು, ಉಮೇಶ್ ಅಂಬಟ, ಧನಂಜಯ ಕುಲಾಲ್ ಮುಂಡೂರು, ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ ಹಿಂದಾರ್, ಮುರಳೀಧರ ಭಟ್ ಬಂಗಾರಡ್ಕ, ವೆಂಕಟೇಶ್ ಅಯ್ಯಂಗಾರ್ ಹಿಂದಾರ್, ಪ್ರಸನ್ನ ಭಟ್ ಪಂಚವಟಿ, ಸುಧೀರ್ ಶೆಟ್ಟಿ ನೇಸರ ಕಂಪ, ಬಾಲಕೃಷ್ಣ ಕಣ್ಣಾರಾಯ ಬನಾರಿ, ಹೆಗ್ಗಪ್ಪ ರೈ ಪೊನೋಣಿ, ವಿಠಲ ಭಟ್ ನೀರೋಡಿ, ಶ್ರೀ ರಂಗ ಶಾಸ್ತಿ ಮಣಿಲ, ಶ್ರೀಕಾಂತ್ ಆಚಾರ್ ಹಿಂದಾರ್, ಅಶೋಕ್ ಕುಮಾರ್ ಪುತ್ತಿಲ, ರಘುನಾಥ್ ಶೆಟ್ಟಿ ಪೊನೋಣಿ, ಜಯಪ್ರಕಾಶ್ ರೈ ಚೆಲ್ಯಡ್ಕ, ಶಿವರಾಮ ಅಡಪ ಪೊನೋಣಿ, ಗುಲಾಬಿ ಎನ್ ಶೆಟ್ಟಿ ಕಂಪ, ಸತೀಶ್ ಶೆಟ್ಟಿ ಪೊನೋಣಿ, ಎಂ.ಡಿ ಬಾಲಕೃಷ್ಣ ಪಜಿಮಣ್ಣು, ಉದಯ್ ಕುಮಾರ್ ಪಜಿಮಣ್ಣು, ಬಾಲಕೃಷ್ಣ ಶೆಟ್ಟಿ ಪಟ್ಟೆ ಸದಸ್ಯರಾಗಿ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ ತೌಡಿಂಜ, ಬಾಲಕೃಷ್ಣ ಶೆಟ್ಟಿ ಪಂಜಳ, ದುಗ್ಗಪ್ಪ ಅಜಿಲ ಕಡ್ಯ, ಭವಾನಿ ಪಜಿಮಣ್ಣು, ಸೇಸಪ್ಪ ಶೆಟ್ಟಿ ಪೊನೋಣಿ, ಪ್ರಸಾದ್ ರೈ ಪಟ್ಟೆ, ಪ್ರಧಾನ ಅರ್ಚಕ ನಾಗೇಶ್ ಕುದ್ರೆತಾಯ, ಪ್ರಸಾದ್ ಬೈಪಡಿತ್ತಾಯರವರು ಆಯ್ಕೆಯಾಗಿದ್ದಾರೆ.