ಪುಣೆ ;ಶ್ರೀ ಗುರು ದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ 20 ನೇ ವಾರ್ಷಿಕೋತ್ಸವವು ನವೆಂಬರ್ 26 ರವಿವಾರದಂದು ಅಪರಾನ್ಹ ಘಂಟೆ 2.00 ರಿಂದ ಬಾಣೆರ್ ನಲ್ಲಿರುವ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಸಭಾಂಗಣದಲ್ಲಿ ವಿವಿದ ಧಾರ್ಮಿಕ ,ಸಾಂಸ್ಕ್ರತಿಕ ,ಹಾಗೂ ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ ..ಶ್ರೀಗುರುದೇವ ದತ್ತ ಸಂಸ್ಥಾನಮ್,,ಶ್ರೀ ದತ್ತಗುರು ವೀರಾಂಜನೇಯ ಸ್ವಾಮಿ ಕ್ಷೇತ್ರ ಓಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾದ್ವಿಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯಿರುವರು .
ದಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪಾದುಕಾಪೂಜೆ , ಗುರುವಂದನೆ ,ಹಾಗೂ ದಾರ್ಮಿಕ ಸಭಾ ಕಾರ್ಯಕ್ರಮ, ಈ ದಾರ್ಮಿಕ ಸಭೆಯಲ್ಲಿ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ,ಮತ್ತು ಸಾದ್ವಿ ಶ್ರೀ ಮಾತಾನಂದಮಯಿಯವರು ದಿವ್ಯ ಉಪಸ್ಥಿತಿತರಿದ್ದು ಜನ ಮಾನಸಕ್ಕೆ ಅಶಿರ್ವಚನದ ಮೂಲಕ ಜ್ಞಾನ ಸಂದೇಶ ನೀಡಲಿದ್ದಾರೆ. ಮುಖ್ಯ ಅಥಿತಿ ಗಳಾಗಿ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳೆಪ್ಪಾಡಿ ಗುತ್ತುರವರು ಆಗಮಿಸಲಿದ್ದಾರೆ .ಗೌರವ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ್ ಶೆಟ್ಟಿ ನೇರೋಳ್,ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ,ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ,,ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ ಕಾತ್ರಜ್ ಪುಣೆ ಅಧ್ಯಕ್ಷ ಸುಭಾಷ್ ಶೆಟ್ಟಿ ಯವರು ಆಗಮಿಸಲಿದ್ದಾರೆ, ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ .ಶೆಟ್ಟಿ ಯವರು ಉಪಸ್ಥಿತಲಿರುವರು . ದಾರ್ಮಿಕ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ಜರಗಲಿರುವುದು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಪ್ರವೀಣ್ ಶೆಟ್ಟಿ ಪುತ್ತೂರು ರವರ ಸಾರಥ್ಯದಲ್ಲಿ ಪುಣೆಯ ಪ್ರಸಿದ್ದ ಯಕ್ಷಗಾನ ಮಂಡಳಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಯವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿಯಲ್ಲಿ ವೀರಮಣಿ ಕಾಳಗ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ .ನಂತರ ಶ್ರೀ ಗುರುದೇವ ಚಿಣ್ಣರ ಬಳಗ ಮತ್ತು ಸದಸ್ಯರಿಂದ ಕುಣಿತ ಭಜನೆ ನಡೆಯಲಿದೆ .
ಈ ದಾರ್ಮಿಕ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ,ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಶ್ರೀಗಳಿಂದ ಆಶಿರ್ವಾದ ಪಡೆದು ಗುರು ಕೃಪೆಗೆ ಪಾತ್ರರಾಗಬೇಕೆಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅದ್ಯಕ್ಷ ರಾದ ಶ್ರೀ ಪ್ರಭಾಕರ ಶೆಟ್ಟಿ,ಪ್ರ .ಕಾರ್ಯದರ್ಶಿ,ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅದ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ ಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿ ಕೊಂಡಿರುತ್ತಾರೆ. ಪೂಜ್ಯ ಶ್ರೀಗಳು ಪುಣೆ ನಗರದಲ್ಲಿ ಮೂರು ದಿನಗಳ ದಾರ್ಮಿಕ ಕಾರ್ಯಕ್ರಮದ ನಿಮಿತ್ತ ಪುಣೆಯಲ್ಲಿರಲಿದ್ದಾರೆ ,ಹೆಚ್ಚಿನ ಮಾಹಿತಿಗಾಗಿ 9822050622 / 9960337625,/ /9372647923 ನಂಬರಿಗೆ ಸಂಪರ್ಕಿಸಬಹುದು .ಕಾರ್ಯಕ್ರಮದ ದಿನದಂದು ಬಾಲಾಜಿ ನಗರದಿಂದ ಕಾತ್ರಜ್, ವಡ್ಗಾಂವ್ವಾ ರ್ಜೆ ಮೂಲಕ ಮತ್ತು ರಾಸ್ತಾ ಪೇಟ್,ಸೋಮವಾರ್ ಪೇಟ್ ,ಗೋಖಲೆ ನಗರ್ ,ಪಾಷಾಣ್ ಮೂಲಕ ಬಂಟರ ಭವನಕ್ಕೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ .
ಶ್ರೀ ಕ್ಷೇತ್ರ ಒಡಿಯೂರು ಮತ್ತು ಶ್ರೀ ಗುರುದೇವ ಸೇವಾ ಬಳಗ ;ಒಡಿಯೂರು ಶ್ರೀಗಳ ಯೌಗಿಕ ಸಾಧನೆ , ಸಮಾಜ ಮುಖಿ ಜೀವನ ದ್ರಷ್ಟಿ ,ಆಧ್ಯಾತ್ಮ ವಿದ್ಯೆಯೊಂದಿಗೆ ಜೀವನ ಶಿಕ್ಷಣದ ಗುರಿಯ ಸಾಕ್ಷಿ ಶ್ರೀ ದತ್ತಾಂಜನೆಯ ಕ್ಷೇತ್ರ ಒಡಿಯೂರು ,ಶ್ರೀ ಗುರುದೇವ ದತ್ತ ಸಂಸ್ಥಾನಂ . ಇಲ್ಲಿ ಪೂಜ್ಯ ಶ್ರೀಗಳ ಸಂಕಲ್ಪ ಶಕ್ತಿ ,ಕರ್ತೃತ್ವ ಶಕ್ತಿ ಮತ್ತು ಧಿಶಕ್ತಿ ಸಮ್ಮಿಲಿತಗೊಂಡಿದೆ .ಈ ಕ್ಷೇತ್ರ ಭಕ್ತಿಯ ಶ್ರದ್ದಾ ಕೇಂದ್ರ ಹೇಗೋ ಹಾಗೆಯ ಅಧ್ಯಾತ್ಮ ಪಾಠ ಶಾಲೆ . ಸಚ್ಚಾರಿತ್ರ್ಯದ ಮಹತ್ವವನ್ನು ,ಸನ್ಮಾರ್ಗದ ಅನಿವಾರ್ಯತೆಯನ್ನು ಜನ ಮಾನಸಕ್ಕೆ ಮನಗಾಣಿಸುವ ಮೂಲಕ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡವರು ಒಡಿಯೂರು ಶ್ರೀಗಳು . ಸಮಾಜದ ಋಣ ತಿರಿಸುವ ತುಡಿತ ಹಾಗೂ ತೀವ್ರ ಕಳಕಳಿಯಿರುವ ಶ್ರೀಗಳು ಎಲ್ಲಾ ವರ್ಗದ ಅಸಹಾಯಕ ಜನರ ಮಾನಸಿಕ , ಶಾರೀರಿಕ ,ಅಸ್ಪಸ್ತರ ದುಃಖ ವಿಮೋಚನೆಗೆ ಶ್ರಮಿಸುತಿರುವುದು ಅಲ್ಲದೆ ,ಗ್ರಾಮೀಣ ಜನತೆ ಸ್ವಾವಲಂಭಿಗಳಾಗಿ ,ಬದುಕಿನಲ್ಲಿ ಮುನ್ನಡೆ ಸಾದಿಸುವಂತಾಗಬೇಕು,ಜೀವನ ಸಂತಸ ,ಸಂಭ್ರಮವನ್ನು ಕಾಣಬೇಕು ಎಂಬುದೇ ಶ್ರೀಗಳ ಆಶಯ.ಇದಕ್ಕಾಗಿ ಸನಾತನ ಸಂಸ್ಕಾರದ ಮೂಲಕ ಗ್ರಾಮಗಳ ದತ್ತು ಸ್ವೀಕಾರ ,ಗ್ರಾಮ ವಿಕಾಸ ಯೋಜನೆ ,ಮಹಿಳಾ ವಿಕಾಸ ಯೋಜನೆ ,ಅರೋಗ್ಯ ಸೇವೆ ,ಆಯುರ್ವೇದ ,ಗೋಶಾಲೆ ,ಮನೆ ನಿರ್ಮಾಣಕ್ಕೆ ಸಹಾಯ ,ಗುರುಕುಲ ,ಗ್ರಾಮೀಣ ಬಡ ಜನತೆಯ ಮಕ್ಕಳಿಗಾಗಿ ಪ್ರಾಥಮಿಕ ,ಪ್ರೌಡ ಶಾಲೆಗಳು ,ತಾಂತ್ರಿಕ ವಿಧ್ಯಾಲಯ ,ಸ್ವಉದ್ಯೋಗ ತರಬೇತಿ ಕೇಂದ್ರ,ಸ್ವಸಹಾಯ ಸಂಘಗಳು ,ಅಧ್ಯಾತ್ಮಿಕ ಭವನ ನಿರ್ಮಾಣ , ಅಲ್ಲದೆ ತುಳುನಾಡಿನ ತುಳುನಾಡ ಭಾಷೆ ,ಕಲೆ ಸಂಸ್ಕ್ರತಿಯ ಉಳಿವಿಗಾಗಿ ವರ್ಷಂಪ್ರತಿ ತುಳು ಸಮ್ಮೇಳನಗಳು ,ಕಮ್ಮಟಗಳು ,ನಿತ್ಯ ಅನ್ನದಾನ ,ಹಾಗೂ ಇನ್ನೂ ಹೆಚ್ಚಿನ ಜನತೆಗೆ ಸಹಾಯಕವಾಗುವ ಸಾಮಾಜಿಕ ಅಭಿವ್ರದ್ದಿ ಕಾರ್ಯಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿವೆ . ಗ್ರಾಮಾಭಿವ್ರದ್ದಿಯ ಮೂಲಕ ಹಳ್ಳಿಗಳ ಉದ್ದಾರ ಹಾಗು ಗ್ರಾಮೀಣ ಜನತೆ ಸ್ವಾವಲಂಭಿಗಲಾಗಳು ಸಾದ್ಯ ಎಂಬ ಉದ್ದೆಶ ಶ್ರೀಗಳದ್ದು,ತುಳುನಾಡಿನಾದ್ಯಂತ ಗ್ರಾಮಗಳಲ್ಲಿ ತಮ್ಮ ಗ್ರಾಮ ವಿಕಾಸ ಯೋಜನೆಯ ಮುಖಾಂತರ ಸ್ವಸಹಾಯ ಸಂಘಗಳ ರಚನೆ ಮಾಡಿ ಸಮಾಜ ಮುಖಿ ಸೇವಾ ಕಾರ್ಯಗಳು ನಡೆಯುತಿವೆ .ಸನಾತನ ಸಂಸ್ಕಾರ ,ಸಂಕಲ್ಪ ಅಭಿಯಾನದಿಂದ ಪ್ರಜ್ಞಾವಂತ ,ಸುಸಂಸ್ಕ್ರತ ,ಸಮೃದ್ದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ ಹಾಗೂ ನಿತ್ಯ ಬದುಕಿನಲ್ಲಿ ಮಾನವೀಯಮೌಲ್ಯಗಳ ಅಗತ್ಯತೆಯನ್ನು ಜನತೆ
ಮನಗಾಣುವಂತೆ ಜೀವನ ಸಂದೇಶವನ್ನು ನಿಡುತಿದ್ದಾರೆ.ಈ ಎಲ್ಲಾ ಸಮಾಜಮುಖಿ ಕಾರ್ಯ ಯೋಜನೆಗಳಿಗೆ ಪೂರಕವಾಗಿ ಕಾರ್ಯ ಗೈಯುತಿರುವ ಸಂಸ್ಥೆಯೇ ಶ್ರೀ ಗುರುದೇವ ಸೇವಾ ಬಳಗ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರವಾಗಿದೆ ,ಶ್ರೀಗಳ ,ಒಡಿಯೂರು ಕ್ಷೇತ್ರದ ಅಂಗ ಸಂಸ್ಥೆಯಾಗಿ ಸ್ಥಾಪನೆಗೊಂಡು ಸುಮಾರು 100 ಮಿಕ್ಕಿದ ಘಟಕಗಳು ಇಂದು ದೇಶಾದ್ಯಂತ ಕಾರ್ಯ ನಿರ್ವಹಿಸುತಿವೆ .ಇದರಲ್ಲಿ ಪುಣೆ ಘಟಕವು ಒಂದಾಗಿದೆ . ಪುಣೆಯಲ್ಲಿ ಬಳಗವು ಸ್ಥಾಪನೆ ಗೊಂಡು ಹತ್ತೊಂಬತ್ತು ವರ್ಷಗಳು ಕಳೆದಿವೆ , ನಮ್ಮ ತಾಯ್ನಾಡಿನ ಹಳ್ಳಿಗಳ ಬಡ ಜನರ ಸೇವೆಗೆ ತನ್ನನ್ನು ಅರ್ಪಿಸಿಕೊಂಡ ಶ್ರೀಗಳ ಕಾರ್ಯ ಯೋಜನೆಗಳಿಗೆ ನಮ್ಮಿಂದಾಗುವ ಸೇವೆಯನ್ನು ತನು ಮನ ಧನದಿಂದ ಅರ್ಪಿಸೋಣ .ಪುಣೆಶ್ರೀ ಗುರು ದೇವ ಸೇವಾ ಬಳಗವು ಇದೆ ಉದ್ದೆಶದೊಂದಿಗೆ ಇಲ್ಲಿ ಕಾರ್ಯ ಗೈಯುತಿದ್ದು ಪೂಜ್ಯ ಸ್ವಾಮಿಜಿಯವರ ಮುಖಾಂತರ ನಡೆಯುವ ಸಮಾಜ ಮುಖಿ ಸೇವಾ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಪ್ರಾರ್ಥಿಸುತ್ತೇವೆ .