ಕುಂದಾಪುರದ ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು.
ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಕಬಡ್ಡಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ನವೆಂಬರ್ ಮಂಡ್ಯದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಲು ತಂಡದ ಆಟಗಾರರಿಗೆ ಪ್ರಾಯೋಜಿತ 12 ಜೊತೆ ಕಬಡ್ಡಿ ಶೂಗಳನ್ನು ನೀಡಿದರು.
ಈ ಸಂದರ್ಭ ಕಬಡ್ಡಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಸೀಮಿತ ವಿದ್ಯಾರ್ಥಿಗಳನ್ನು ಹೊಂದಿರುವ ಗ್ರಾಮೀಣ ಸರ್ಕಾರಿ ಶಾಲೆಯಾದರೂ ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ವಿಭಾಗೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲಲು ನಿಮ್ಮ ಅತ್ಯುತ್ತಮವಾದ ಆಟವನ್ನು ಆಡಿ. ನಿಮ್ಮಲ್ಲಿ ದೃಢತೆ ಮತ್ತು ಶಿಸ್ತು ಇರಲಿ. ಅದಕ್ಕಿಂತ ಹೆಚ್ಚಾಗಿ ನೀವು ಆಟವನ್ನು ಪ್ರೀತಿಸಿ ಮತ್ತು ಆಟವನ್ನು ಆನಂದಿಸಿರಿ. ಅತ್ಯುತ್ತಮ ತಂಡದ ಸಂಯೋಜನೆಯಿಂದಾಗಿ ಯಾವುದೇ ತಂಡವನ್ನು ಸೋಲಿಸಲು ನಿಮ್ಮ ತಂಡ ಸಾಕಷ್ಟು ಪ್ರಬಲವಾಗಿದೆ . ನಿಮಗೆಲ್ಲರಿಗೂ ಶುಭಾಶಯಗಳು. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಆಟಗಾರರನ್ನು ಹುರಿದುಂಬಿಸಿದರು.
ಶಾಲೆಯ ವತಿಯಿಂದ ಗೌತಮ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಈ ಸಂದರ್ಭ ಶಾಲಾ ಅಧ್ಯಾಪಕ ವರ್ಗದವರು, ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.