ಕನ್ನಡ ಸಂಘ ಬಹರೈನ್ ನ ಅಧ್ಯಕ್ಷರಾದ ಶ್ರೀ ಅಮರನಾಥ ರೈ ಅವರು ಕರ್ನಾಟಕದ ಗೌರವಾನ್ವಿತ ಗೃಹ ಸಚಿವ ಡಾ ಜಿ ಪರಮೇಶ್ವರ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿದರು ಮತ್ತು ಅವರ ಇತ್ತೀಚಿನ ಬಹರೈನ್ ಭೇಟಿಗಾಗಿ ಸಂಘ ಮತ್ತು ಸದಸ್ಯರ ಕೃತಜ್ಞತೆಯನ್ನು ತಿಳಿಸಿದರು.
ಸಚಿವರ ಬಹರೈನ್ ಭೇಟಿಯ ಸಂದರ್ಭದಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಅವರು ಚರ್ಚಿಸಿದರು. ಬಹರೈನ್ ನಲ್ಲಿ ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ಸಂಘ ಮತ್ತು ಸದಸ್ಯರ ಪ್ರಯತ್ನಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂಘದ ಚಟುವಟಿಕೆಗಳಿಗೆ ತಮ್ಮ ಬೆಂಬಲದ ಭರವಸೆ ನೀಡಿದರು. ಭೇಟಿ ಸಂದರ್ಭದಲ್ಲಿ ಮಲ್ಲಾ ರೆಡ್ಡಿ ಹೆಲ್ತ್ ಸಿಟಿಯ ಪ್ರೊ ವೈಸ್ ಛಾನ್ಸಲರ್ ಡಾ ಪಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.