ಮಂಗಳೂರಿನ ನ್ಯಾಯವಾದಿ ಕೆ. ದಯಾನಂದ ರೈ ಅವರ ಸುಸಜ್ಜಿತ ಕಚೇರಿ ಉದ್ಘಾಟನೆ ನಗರದ ಪಿ.ವಿ.ಎಸ್. ಜಂಕ್ಷನ್ ಬಳಿಯ ಮಾನಸ ಟವರಿನ 1ನೇ ಮಹಡಿಯಲ್ಲಿ ನಡೆಯಿತು. ಖ್ಯಾತ ನ್ಯಾಯವಾದಿ ಎಂ. ವಿ. ಶಂಕರ್ ಭಟ್ ಅವರು ಉದ್ಘಾಟಿಸಿದರು. ಉದ್ಘಾಟನೆ ಪೂರ್ವದಲ್ಲಿ ನ್ಯಾಯವಾದಿ ಕೆ. ದಯಾನಂದ ರೈ ಅವರು ಗುರುಗಳಾದ ನ್ಯಾಯವಾದಿ ಕೆ. ಶಂಕರ್ ಭಟ್ ಅವರಿಗೆ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಿ ಅವರನ್ನು ಸನ್ಮಾನಿಸಿದರು.
ನ್ಯಾಯವಾದಿ ಕೆ. ದಯಾನಂದ ರೈ ಅವರ ತಾಯಿ ಎಲ್ನಾಡುಗುತ್ತು ಕೆ. ಲಲಿತಾ ರೈ ನ್ಯಾಯವಾದಿ ಕೆ. ದಯಾನಂದ ರೈ, ಪತ್ನಿ ಡಾ. ವೀಣಾ ಕೆ. ಆರ್., ಸಹಾಯಕ ಕೃಷಿ ನಿರ್ದೇಶಕ ಅಂಬಾಬೀಡು ಕೆ. ಜಗನ್ನಾಥ್ ರೈ, ಮಾಜಿ ಪಂಚಾಯತ್ ವಿಸ್ತರಣಾ ಅಧಿಕಾರಿ ಅಂಬಾಬೀಡು ಪದ್ಮಾವತಿ ರೈ ಮತ್ತು ವಾಸುದೇವ ರೈ ಪಿಲತ ಬೆಟ್ಟು ಉಪಸ್ಥಿತರಿದ್ದರು.
ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಓ.ಟಿ.ಭಟ್, ವಾಸುದೇವ ರಾವ್, ಮಹಾಬಲ ಶೆಟ್ಟಿ, ಜಗದೀಶ್ ರಾವ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಉಪಸ್ಥಿತರಿದ್ದರು. ಶುಭ ಹಾರೈಸಿದರು.