ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಬೊರಿವಿಲಿ ಎಜುಕೇಶನ್ ನ ಕಾರ್ಯಧ್ಯಕ್ಷ ಡಾ. ಪಿ ವಿ ಶೆಟ್ಟಿಯವರ 60 ನೇ ಹುಟ್ಟುಹಬ್ಬದ ಪ್ರಯುಕ್ತ ಬೊರಿವಿಲಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿದರು.
ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿಯವರು ಡಾ. ಪಿ ವಿ ಶೆಟ್ಟಿ ದಂಪತಿಯನ್ನು ಹೂಗುಚ್ಚ ನೀಡಿ ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಪೋಷಕ ಬಿ ವಿವೇಕ್ ಶೆಟ್ಟಿ, ಪೋಷಕರಾದ ಸುಧಾಕರ್ ಹೆಗ್ಡೆ, ಶ್ರೀಮತಿ ರಂಜಿನಿ ಸುಧಾಕರ್ ಹೆಗ್ಡೆ, ಪದ್ಮನಾಭ್ ಪಯ್ಯಡೆ, ರವಿ ಶೆಟ್ಟಿ ಸಾಯಿ ಪ್ಯಾಲೇಸ್, ರತ್ನಾಕರ್ ಶೆಟ್ಟಿ ಮುಂಡ್ಕೂರು, ವಿಜಯ ಭಂಡಾರಿ ಮತ್ತು ಜಯ ಎ ಶೆಟ್ಟಿ ಶಿಮಂತೂರು ಉಪಸ್ಥರಿದ್ದು ಡಾ. ಪಿ ವಿ ಶೆಟ್ಟಿ ದಂಪತಿಯನ್ನು ಅಭಿನಂದಿಸಿದರು.