ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ದಶಮಾನೋತ್ಸವ ಸಂಭ್ರಮದ ಪೂರ್ವಭಾವಿ ಸಮಾಲೋಚನಾ ಸಭೆಯು ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಶೆಡ್ಡೆ ಹೊಸಲಕ್ಕೆ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರಿಗೆ ಸಮ್ಮಾನ, ವಾರ್ಷಿಕ ಮಹಾಸಭೆ, ಯುವ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮವು ಜು.16ರಂದು ಬೆಳಗ್ಗೆ 9.30ರಿಂದ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆಯಲಿದೆ. ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಸುಮಾರು 25ಕ್ಕೂ ಮಿಕ್ಕಿ ಬಂಟರ ಸಂಘದ ಕಲಾವಿದರಿಂದ ನೃತ್ಯ ಸ್ಪರ್ಧಾ ಸಮ್ಮಿಲನ ಯುವ ಸಂಭ್ರಮ – 2023 ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ವಿವಿಧ ಬಂಟರ ಸಂಘದ ಅಧ್ಯಕ್ಷರಿಂದ ಕಾರ್ಯಕ್ರಮದ ರೂಪು ರೇಷೆಯನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು. ಸುದರ್ಶನ್ ಶೆಟ್ಟಿ ಪೆರ್ಮಂಕಿ, ಹರೀಶ್ ಶೆಟ್ಟಿ ಉಪ್ಪುಗೂಡು, ಜಯರಾಮ್ ಶೆಟ್ಟಿ, ಜಯರಾಮ್ ರೈ, ಪುರುಷೋತ್ತಮ್ ಮಲ್ಲಿ, ಶ್ರವಣ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.