ಪತ್ರಿಕಾ ವರದಿ ಮತ್ತು ಅಂಕಣ ಬರಹಗಳಿಂದ ಹಲವಾರು ಸಾಹಿತ್ಯ ಆಸಕ್ತರನ್ನು ಬರಹದ ಮೂಲಕ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನದೊಂದಿಗೆ ಹಿತಾಸಕ್ತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಖ್ಯಾತ ಪತ್ರಿಕೆ ಸುದ್ದಿ ಮನೆ ವಾರಪತ್ರಿಕೆಯ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಭಾವ ದೀಪ್ತಿ .. ಅಂಕಣ ಬರಹಕ್ಕೆ ನಾಡೋಜ ಕೆಂಚನೂರು, ಶಂಕರ್ ಅವರು ಹಾರ್ದಿಕ ಅಭಿನಂದನೆಗಳ ಮೂಲಕ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಮತ್ತು ಪತ್ನಿ ಶ್ರೀಮತಿ ಪೂಜಾ ಎಸ್. ಶೆಟ್ಟಿ ಇವರನ್ನು ಹಾರ್ದಿಕವಾಗಿ ಅಭಿನಂದಿಸಲಾಯಿತು. ಇವರು ಉತ್ತರ ಕರ್ನಾಟಕದ ಪ್ರಸಿದ್ಧ ಪತ್ರಿಕೆಗಳಲ್ಲಿ ಹಾಗೂ ವೆಬ್ ಸುದ್ದಿ ವಾಹಿನಿ ಮತ್ತು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಬೆಂಗಳೂರು ಇದರ ಮುಖ್ಯಸ್ಥರಾಗಿ, ಪಬ್ಲಿಕ್ ಫೈಲ್ ಕನ್ನಡ ಪಾಕ್ಷಿಕ ಪತ್ರಿಕೆಯ ರಾಜ್ಯ ವಿಶೇಷ ವರದಿಗಾರರಾಗಿ ,ಸುದ್ದಿ ಮನೆ ವಾರಪತ್ರಿಕೆ ಇದರ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ “ಭಾವ ದೀಪ್ತಿ” ಅಂಕಣವನ್ನು ಸುಮಾರು ಸಾವಿರಕ್ಕೂ ಹೆಚ್ಚು ಕಂತುಗಳನ್ನ ಪ್ರಸ್ತುತ ವಿದ್ಯಮಾನದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಮೀಡಿಯಾ ಅಸೋಸಿಯೇಷನ್ ಕರ್ನಾಟಕ ನೆಟ್ವರ್ಕ್ ಲಿಮಿಟೆಡ್ ಕೂಡ ಮಾಡಿದ ಮಾಧ್ಯಮ ಪ್ರಶಸ್ತಿ 2023, ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಕೊಡಮಾಡಿದ 2022- 23ನೇ ಸಾಲಿನ ಮಾಧ್ಯಮಭೂಷಣ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಅದಲ್ಲದೆ ಕಾರ್ಯಕ್ರಮಗಳ ಉತ್ತಮ ನಿರೂಪಣೆ ಮಾಡುವಂತಹ ಕಲೆಗಾರಿಕೆಯನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುದ್ದಿ ಮನೆ ಕನ್ನಡ ವಾರಪತ್ರಿಕೆಯ ನಿರಂತರ ಅಂಕಣಕಾರರಾಗಿ ಹಾಗೂ ಹಲವರು ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ಮಾಧ್ಯಮ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುವ ಇವರ ಸಾಧನೆಗೆ ಹಲವರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ.
ಅದೇ ರೀತಿ ಬೆಂಗಳೂರಿನ ಖ್ಯಾತ ನಾಟಕಗಾರ ಪತ್ರಕರ್ತ ಹಿರಿಯ ವಿದ್ವಾಂಸ ಚಲನಚಿತ್ರ ನಿರ್ಮಾಪಕ,ನಾಟಕ ಕೆಂಚನೂರು ಶಂಕರ್ ಶೆಟ್ಟಿ ಅವರು ದಂಪತಿಗಳನ್ನ ಅಭಿನಂದಿಸಿ ಶುಭ ಹಾರೈಸಿದರು. ಇನ್ನು ವಿಶೇಷವಾದ ಬರಹಗಳಿಗೆ ಪ್ರಾಮುಖ್ಯತೆ ಮತ್ತು ಆದ್ಯತೆಗಳನ್ನು ಅಳವಡಿಸಿ ಕೊಳ್ಳುವಂತೆ ಸೂಚಿಸಿದರು. ಪತ್ರಿಕ ವರದಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುತ್ತದೆ ಪತ್ರಿಕಾ ಧರ್ಮವನ್ನು ಹಲವು ಶ್ರೇಷ್ಠ ಪತ್ರಕರ್ತರಿಂದ ಸಮಾಜವನ್ನು ತಿದ್ದುವ ಕೆಲಸವಾಗುತ್ತಿದೆ. ಸಮಾಜದ ಬಹುಮುಖ್ಯ ಪಾತ್ರಗಳಲ್ಲಿ ಪತ್ರಿಕೋದ್ಯಮ ತನ್ನದೇ ಆದಂತಹ ಕಾರ್ಯತಂತ್ರ ಬೆಳೆಸುವುದರಿಂದ ಸಮಾಜದಲ್ಲಿ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂದು ವಿಶ್ಲೇಷಿಸಿದರು. ಇನ್ನು ಹಲವಾರು ವಿಚಾರಗಳ ಬಗ್ಗೆ ಪತ್ರಿಕೋದ್ಯಮದಲ್ಲಿ ಬೆಳಕು ಚೆಲ್ಲುವಂತೆ ಸೂಚಿಸಿದರು. ಮಲ್ಲೇಶ್ವರಂ ನ ಕಚೇರಿಯಲ್ಲಿ ಅಭಿನಂದನಾ ಸೂಚಕವಾಗಿ ಸನ್ಮಾನಿಸಿ, ಗೌರವ ಸೂಚಿಸಿದರು.