ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಸಂಸ್ಥಾಪಕಿ ಡಾ.ಮಮತಾ ಹೆಗ್ಡೆ ಅವರು ಈ ಬಾರಿಯ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣಾ ಆಕಾಂಕ್ಷಿಯಾಗಿದ್ದಾರೆ. ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ನೌಕರಿಗಾಗಿ ಸ್ವರ್ದಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಪರೀಕ್ಷಾ ಪೂರ್ವ ತರಬೇತಿಯ ವ್ಯವಸ್ಥೆಯನ್ನು ನಮ್ಮ ಕ್ಷೇತ್ರದಲ್ಲಿ ಸರ್ಕಾರಿ/ಖಾಸಗಿ ಸಹಭಾಗಿತ್ವದೊಂದಿಗೆ ತೆರೆಯಲು ಶ್ರಮಿಸುತ್ತೇನೆ. ಈ ಮೂಲಕ ಕ್ಷೇತ್ರದ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲಿ, ಬ್ಯಾಂಕ್, ರೈಲ್ವೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಕೆಲಸ ದೊರಕಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಡಾ.ಮಮತಾ ಹೆಗ್ಡೆ ಹೇಳಿದ್ದಾರೆ.
Previous Articleಯಶಸ್ವಿಯಾಗಿ ನಡೆದ ಚಿಣ್ಣರ ಬಿಂಬ – 20ನೇ ಮಕ್ಕಳ ಉತ್ಸವ
Next Article ಪತ್ರಕರ್ತ ರವೀಂದ್ರ ಶೆಟ್ಟಿಯವರ ನಮ್ಮ ಉಡುಪಿ ಕೃತಿ ಬಿಡುಗಡೆ