ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್ ಮಿನಿ ಹಾಲ್ನಲ್ಲಿ ನಡೆದ ನಗರದ ಕನ್ನಡ ಲೇಖಕಿಯರ ಬಳಗ ‘ ಸೃಜನಾ’ ದ ಸಭೆಯಲ್ಲಿ 2023 ರಿಂದ 2025 ರವರೆಗಿನ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಸಂಚಾಲಕಿಯಾಗಿ ಶೀಮತಿ ಪದ್ಮಜಾ ಮಣ್ಣೂರ್ , ಕಾರ್ಯದರ್ಶಿಯಾಗಿ ಶೀಮತಿ ಲತಾ ಸಂತೋಷ್ ಮುದ್ದುಮನೆ, ಕೋಶಾಧಿಕಾರಿಯಾಗಿ ಡಾ. ದಾಕ್ಷಾಯಣಿ ಯಡಹಳ್ಳಿ ಆಯ್ಕೆಯಾದರು.ಸಹ ಸಂಚಾಲಕಿಯಾಗಿ ಡಾ. ಜಿ.ಪಿ. ಕುಸುಮ ,ಜೊತೆ ಕಾರ್ಯದರ್ಶಿಯಾಗಿ ಕುಸುಮ ಚಂದ್ರ ಪೂಜಾರಿ,ಜೊತೆ ಕೋಶಾಧಿಕಾರಿಯಾಗಿ ಶೀಮತಿ ಸರೋಜಾ ಅಮಾತಿಯವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಪುಷ್ಪ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದರು.
ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ
ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯೆಯರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಅವರು ಬಳಗವು ನೂತನ ಪದಾಧಿಕಾರಿಗಳ ಅಧಿಕಾರಾವಧಿ ಯಲ್ಲಿ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಹಾರೈಸಿದರು.
ಸಲಹಾ ಸಮಿತಿಯ ಸದಸ್ಯೆ, ನಗರದ ಹಿರಿಯ ಲೇಖಕಿ ಡಾ.ಸುನೀತಾ ಶೆಟ್ಟಿಯವರು ಮಾತನಾಡುತ್ತಾ ಬಳಗದ ಮುಂದಿನ ಯೋಜನೆ, ಯೋಚನೆ ಕಾರ್ಯಗಳತ್ತ ಗುರಿ ಇರಲಿ ಎಂಬ ಮಾಹಿತಿ ನೀಡಿದರಲ್ಲದೆ ಲೇಖಕಿಯರಿಗೆ ಸಾಹಿತ್ಯ ವಲಯದಲ್ಲಿ ಕ್ರಿಯಾಶೀಲರಾಗಿರಲು ಕರೆಯಿತ್ತರು.
ಬಳಗದ ಹಿರಿಯ -ಕಿರಿಯ ಸದಸ್ಯರು ತಮ್ಮ ಅನುಭವದಂತೆ ಸಂಘದ ಕಾರ್ಯ ವೈಖರಿಗೆ , ಪ್ರಗತಿಗೆ ಸೂಕ್ತವಾದ ಮಾಹಿತಿ, ಮಾರ್ಗದರ್ಶನ ನೀಡಿದರು. 2003 ರಲ್ಲಿ ಸ್ಥಾಪನೆಗೊಂಡ ಸೃಜನಾ ಲೇಖಕಿಯರ ಬಳಗವಿಗ 20 ಹರೆಯದಲ್ಲಿದ್ದು . ಅನೇಕ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕ ಬಿಡುಗಡೆ ಕಾರ್ಯ ಕ್ರಮ , ಸಾಹಿತ್ಯ ದ ಕಾರ್ಯ ಕ್ರಮಗಳಿಗೆ ಒತ್ತು ನೀಡುತ್ತಿದ್ದು ಉದಯೋನ್ಮಖ ಲೇಖಕಿಯರಿಗೆ ಪ್ರೋತ್ಸಾಹ ನೀಡುತ್ತಿದೆ.
ಪ್ರಾರಂಭದಲ್ಲಿ ಬಳಗದ ಸದಸ್ಯೆ ಲಕ್ಷ್ಮೀ ಹೇರೂರು ಪ್ರಾರ್ಥನೆ ಹಾಡಿದರು. ಕಾರ್ಯ ಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಶೀಮತಿ ಲತಾ ಸಂತೋಷ್ ಮುದ್ದುಮನೆ ಧನ್ಯವಾದಗೈದರು.