ತುಳುಸಂಘ ಪಿಂಪ್ರಿ ಚಿಂಚ್ವಾಡ್ ಇದರ 10 ನೇ ವಾರ್ಷಿಕೋತ್ಸವ ಸಮಾರಂಭವು ಡಿ . 4 ರಂದು ರಾಮಕೃಷ್ಣ ಮೋರೆ ಸಭಾಗೃಹ ,ಚಿಂಚ್ವಾಡ್ ಇಲ್ಲಿ ಸಂಜೆ ಗಂಟೆ 3 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ,ಚಿಂತಕ ,ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿ ,ಗೌರವ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಆಗಮಿಸಲಿದ್ದಾರೆ . ಈ ಸಂದರ್ಭ ಖ್ಯಾತ ಸಮಾಜಸೇವಕ, ಮೂಲಕ ಜನಾನುರಾಗಿಯಾಗಿರುವ ರವಿ ಕಟಪಾಡಿ ಇವರನ್ನು ವರ್ಷದ ವಿಶೇಷ ಸಾಧಕರನ್ನಾಗಿ ಸಮ್ಮಾನಿಸಲಾಗುವುದು .
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಿತಿ ಸದಸ್ಯರಿಂದ ನೃತ್ಯ ವೈವಿಧ್ಯಗಳು , ಹಾಗೂ ಮನೋರಂಜನೆಯಂಗವಾಗಿ ಶಿಮಂತೂರು ಚಂದ್ರಹಾಸ ಸುವರ್ಣ ನಿರ್ದೇಶನದಲ್ಲಿ ತುಳು ನಾಟಕ “ಆಲಡೆದ ಅಪ್ಪೆನ ಓಲಗ” ಪ್ರದರ್ಶನಗೊಳ್ಳಲಿದೆ . ಕಾರ್ಯಕ್ರಮದ ಕೊನೆಗೆ ಪ್ರೀತಿಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ
. ಸಂಸ್ಥೆಯ ಕಾರ್ಯವೈಖರಿ
ಕಳೆದ 10 ವರ್ಷಗಳ ಹಿಂದೆ ಪಿಂಪ್ರಿ- ಚಿಂಚ್ವಾಡ್ ಪರಿಸರದಲ್ಲಿರುವ ತುಳುನಾಡ ಬಾಂಧವರನ್ನು ಜಾತಿ, ಮತ ,ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಾಂಘಿಕವಾಗಿ ಒಗ್ಗೂಡಿಸಲು ಆ ಮೂಲಕ ತುಳುನಾಡಿನ ತುಳು ಭಾಷೆ ,ಸಂಸ್ಕೃತಿ ,ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಅಂತೆಯೇ ನಮ್ಮ ತುಳುನಾಡ ಮೌಲಿಕ ಪರಂಪರೆಗಳನ್ನು ಉಳಿಸಿ ಪೋಷಿಸುವ ಉದ್ದೇಶದಿಂದ ಪುಣೆ ತುಳುಕೂಟವು ಪಿಂಪ್ರಿ -ಚಿಂಚ್ವಾಡ್ ಪ್ರಾದೇಶಿಕ ಸಮಿತಿಯನ್ನು ರಚಿಸಿದ್ದು ಅತೀ ಕಡಿಮೆ ಅವಧಿಯಲ್ಲಿ ಈ ಸಮಿತಿಯು ಕಾರ್ಯಾಧ್ಯಕ್ಷರ ಹಾಗೂ ಸಮಿತಿಯ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಂಘದ ಧ್ಯೇಯೋದ್ದೇಶಗಳನ್ನು ಈಡೇರಿಸಿ ಪಿಂಪ್ರಿ -ಚಿಂಚ್ವಾಡ್ ಪರಿಸರದ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದಿದೆ .ನಂತರದ ದಿನಗಳಲ್ಲಿ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿ ಬೆಳೆದು “ತುಳು ಸಂಘ ಪಿಂಪ್ರಿ ಚಿಂಚ್ವಾಡ್ “ಹೆಸರಿನಿಂದ ಕರೆಯಲ್ಪಡುತ್ತಿದ್ದು ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಮುಂದಡಿಯಿಡುತ್ತಿದೆ .
ಸಂಘವು ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕ ಧನ ಸಹಾಯವನ್ನು ವಿತರಣೆ ,ಅಶಕ್ತರಿಗೆ ,ರೋಗಿಗಳಿಗೆ ತುರ್ತು ಸಹಾಯ,ಕೊರೋನಾ ಮಹಾಮಾರಿಯ ಸಂದರ್ಭ ಮಾನವೀಯ ಸಹಕಾರ . ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ ,ವಾರ್ಷಿಕ ಕ್ರೀಡಾಕೂಟದ ಆಯೋಜನೆ ,ಪ್ರತೀ ವಾರ್ಷಿಕೋತ್ಸವವನ್ನು ವೈವಿಧ್ಯಮಯವಾಗಿ ಆಚರಿಸಿ ಪ್ರಾದೇಶಿಕ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವುದು ,ವಾರ್ಷಿಕೋತ್ಸವ ಸಂದರ್ಭಗಳಲ್ಲಿ ತುಳುನಾಡಿನ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ನಮ್ಮ ಸಂಸ್ಕೃತಿಯ ಪರಿಚಯವನ್ನು ನೀಡುವುದು ಮುಂತಾದ ಕಾರ್ಯಗಳನ್ನು ಮಾಡುತ್ತಾ ಪ್ರಸಿದ್ಧಿಯನ್ನು ಗಳಿಸಿದೆ .
ಇದೀಗ ಸಂಸ್ಥೆಯ ದಶಮಾನೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಪೂರ್ವತಯಾರಿಯನ್ನು ಮಾಡಲಾಗಿದ್ದು ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ,ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಮಹೇಶ್ ಹೆಗ್ಡೆ ಶ್ಯಾಮ್ ಸುವರ್ಣ ,ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ ,ಶೇಖರ್ ಚಿತ್ರಾಪು ,ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಕುರ್ಕಾಲ್ ,ಕೋಶಾಧಿಕಾರಿ ಗಣೇಶ್ ಅಂಚನ್ ,ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು , ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ ನಿಟ್ಟೆ ,ಉಪ ಕಾರ್ಯಾಧ್ಯಕ್ಷ ಜಯ ಶೆಟ್ಟಿ ರೆಂಜಾಳ , ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ , ಕ್ರೀಡಾ ಸಮಿತಿ ಉಪ ಕಾರ್ಯಾಧ್ಯಕ್ಷ ವಿಕಾಸ್ ಅಡಪ ,ಜೊತೆಕಾರ್ಯದರ್ಶಿ ಶುಭಕರ ಶೆಟ್ಟಿ ,ಜೊತೆ ಕೋಶಾಧಿಕಾರಿ ಅಲ್ತಾಫ್ ಉಡುಪಿ ,ಜನಸಂಪರ್ಕಾಧಿಕಾರಿಗಳಾದ ಕುಸುಮಾ ಸಾಲಿಯಾನ್ ,ರತ್ನಾಕರ ಶೆಟ್ಟಿ ಹಿಂಜೆವಾಡಿ ,ಉದಯ್ ಶೆಟ್ಟಿ ಲೋನವಾಲ, ಚಂದ್ರಶೇಖರ ಪೂಜಾರಿ ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ , ಯುವ ವಿಭಾಗದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿನಯ್ ಪೂಜಾರಿ ಮತ್ತು ಸರ್ವ ಪದಾಧಿಕಾರಿಗಳು ಶ್ರಮಿಸುತ್ತಿ ದ್ದು ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದ್ದಾರೆ.