ಮುಂಬಯಿ (ಆರ್ ಬಿ ಐ), ಅ.12: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ ಆರ್ಥಿಕ ತಜ್ಞ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ ಆಫ್ ಇಂಡಿಯಾ) ಅಧಿಕಾರಿ ಡಾ| ಆರ್.ಕೆ ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಅವರು ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್ ಟಿ) ಇದರ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿ ಆಯ್ಕೆ ಆಗಿರುತ್ತಾರೆ. ಎಂಡಿಆರ್ ಟಿ ಅಧ್ಯಕ್ಷ ರಾಂಡಿ ಎಲ್.ಸ್ಟ್ರಿಚ್ ಫೀಲ್ಡ್ ಅವರು ಡಾ| ಆರ್.ಕೆ ಶೆಟ್ಟಿ ಅವರಿಗೆ ಆಯ್ಕೆಯ ಅಧಿಕೃತ ಪ್ರಮಾಣ ಪತ್ರವನ್ನು ಕಳುಹಿಸಿ ಅಭಿನಂದಿಸಿರುವುದಾಗಿ ಎಂಡಿಆರ್ ಟಿ ವಕ್ತಾರರು ತಿಳಿಸಿದ್ದಾರೆ.
ಎಂಡಿಆರ್ ಟಿಯ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗುವ ಕನಸು ಹೊತ್ತು ಅಂತಹ ಸಾಧನೆಯನ್ನು ಸಾಧಿಸಿದ ಭಾರತದ ಕೆಲವೇ ಸಾಧಕರಲ್ಲಿ ಡಾ| ಆರ್.ಕೆ ಓರ್ವರಾಗಿರುವರು. ಕ್ಲಬ್ ಸದಸ್ಯತ್ವ ಪಡೆಯುವ ಮುಖೇನ ಶೆಟ್ಟಿ ಅವರು ಎಂಡಿಆರ್ ಟಿ ಸ್ಟೋರ್ ನಿಂದ ವಿಶೇಷ ಕ್ವಾರ್ಟರ್ ಸೆಂಚುರಿ ಫಲಕ ಸ್ವೀಕರಿಸಲು ಆರ್ಹರೆಣಿಸಿರುವರು.
ಕರ್ನಾಟಕದ ಚಿಕ್ಕಮಗಳೂರು ಇಲ್ಲಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು ಶ್ರೀಮತಿ ಅಪ್ಪಿ ಕೆ.ಶೆಟ್ಟಿ ದಂಪತಿ ಸುಪುತ್ರರಾಗಿದ್ದು ಅರ್ಥಶಾಸ್ತ್ರದಲ್ಲಿ ಬಿಕಾಂ ಪದವೀಧರನಾಗಿ ಹಣಕಾಸು ನಿರ್ವಹಣೆಯಲ್ಲಿ ಡಿಪ್ಲೋಮಾ , ಅಮೇರಿಕಾದ ವಿಮಾ ಕಾಲೇಜ್ನಿಂದ ಎಲ್ಯುಟಿಸಿಎಫ್ ಪದವಿಧರನಾಗಿರುವರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ ಅವರು ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯ ಸಂಭ್ರಮಿಸಿದ 43ನೇ ಸಂಸ್ಥಾಪನಾ ದಿನಾಚರಣೆಯ ಶುಭಾವಸರದಲ್ಲಿ ಮುಂಬೈವಾಸಿ ತುಳು-ಕನ್ನಡಿಗರಾಗಿದ್ದು ಪ್ರತಿಷ್ಠಿತ ಮಂಗಳೂರು ವಿವಿ ಸನ್ಮಾನ ಗೌರದಿಂದ ಸನ್ಮಾನಿತರಾಗಿದ್ದರು.
ಇಸ್ಸಾರ್ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ ಕೆ ಶೆಟ್ಟಿ ಎಂಡ್ ಕಂಪೆನಿ ಇದರ ಆಡಳಿತ ನಿರ್ದೇಶಕರಾಗಿದ್ದು ಪ್ರಸ್ತುತ ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ ಇದರ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿ ಇನ್ನಿತರ ಹತ್ತುಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ತೊಡಗಿಸಿ ಕೊಂಡಿರುವರು. ಈ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಡಾ| ಆರ್.ಕೆ ಶೆಟ್ಟಿ ಅವರಿಗೆ ಅಭಿನಂದಿಸಿ ಶುಭ ಕೋರಿರುವರು.