ಮೂಡಬಿದಿರೆಯ ಪ್ರತಿಷ್ಠಿತ ಮಿಜಾರು ಮನೆತನದ ಬಂಟ ಸಮಾಜದ ಹಿರಿಯರಾದ ಮಿಜಾರು ಆನಂದ ಆಳ್ವರಿಗೆ ಪುತ್ತೂರಿನ ಪಿ ಬಿ ರೈ ಪ್ರತಿಷ್ಠಾನದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಶಿಕ್ಷಣ ಕಾಶಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ನಿರ್ಮಾತೃಗಳಾದ ಡಾ. ಮೋಹನ್ ಆಳ್ವ ಅವರ ಪಿತೃವರ್ಯರಾದ ಮಿಜಾರು ಆನಂದ ಆಳ್ವ ಅವರು ಕೃಷಿ, ಕಂಬಳ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಗೈದು 105 ವರುಷಗಳ ಸಾರ್ಥಕ ಬದುಕಿನಲ್ಲಿ ಮೂಡಬಿದಿರೆಯ ಶಿಕ್ಷಣ ಕಾಶಿ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿಗೆ ಶಿಕ್ಷಣ ಕಲೆ ಉದ್ಯೋಗ ವನ್ನು ಒದಗಿಸಿದ ಮೂಡಬಿದಿರೆ ಯ ನಿರ್ಮಾತೃ ಡಾ. ಮೋಹನ್ ಆಳ್ವ ಅವರನ್ನು ಈ ಪುಣ್ಯ ಭೂಮಿಗೆ ಕೊಡುಗೆಯಾಗಿ ನೀಡಿರುವುದನ್ನು ಪಿ ಬಿ ರೈ ಪ್ರತಿಷ್ಠಾನದ ಗೌರವಾಧ್ಯಕ್ಷರಾದ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷರಾದ ಕಾವು ಹೇಮನಾಥ್ ಶೆಟ್ಟಿಯವರು ಗೌರವಾರ್ಪಣೆ ಸಲ್ಲಿಸಿ ಮುಕ್ತ ಕಂಠದಿಂದ ಪ್ರಷ0ಶಿಸಿದರು. ಪಿ ಬಿ ರೈ ಪ್ರತಿಷ್ಠಾನದ ಅಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ ಯವರು
ಡಾ. ಮೋಹನ್ ಆಳ್ವ ಅವರನ್ನು ಶಿಕ್ಷಣ ಮತ್ತು ಕಲಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಮಿಜಾರು ಆನಂದ ಆಳ್ವ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಶ್ಲಾಗಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಮೋಹನ್ ಆಳ್ವ, ಮತ್ತು ಪುತ್ರರಾದ ವಿವೇಕ್ ಆಳ್ವ ದಂಪತಿಗಳು, ಡಾ. ವಿನಯ್ ಆಳ್ವ ದಂಪತಿಗಳು, ಅನಿತಾ ಹೇಮನಾಥ್ ಶೆಟ್ಟಿ ಯವರು, ಡಾ. ವನಿತಾ ಶೆಟ್ಟಿ ಯವರು, ಪ್ರಭಾ ಸದಾಶಿವ ರೈ ದಾಂಬೆಕಾನ ಮತ್ತು ಗಣ್ಯರು ಉಪಸ್ಥಿತರಿದ್ದರು.