ಪೆರ್ಮೆದ ಕಲಾವಿದೆರ್ ಚೇಳ್ಯಾರು ಇದರ ದ್ವಿತೀಯ ವರ್ಷದ ರಂಗ ಸಂಗಮ ನವೆಂಬರ್ 7 ರಂದು ಶನಿವಾರ ಸಂಜೆ 6.30 ಕ್ಕೆ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪೆರ್ಮುದೆ ಶ್ರೀ ಶಾರದ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ವಹಿಸಲಿದ್ದಾರೆ. ಎನ್ ರಾಘವೇಂದ್ರ ಕಾರಂತ್ (ಪುರೋಹಿತರು ಚೇಳ್ಯಾರು) ಇವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಧಾಕರ್ ಎಸ್ ಪೂಂಜ (ಜನನಿ ಕನ್ಸ್ಟ್ರಕ್ಷನ್ ಕುಳಾಯಿ), ಶ್ರೀನಿವಾಸ ಅಮೀನ್ (ಗೌರವಾಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಚೇಳ್ಯಾರು), ಪ್ರವೀಣ್ ಶೆಟ್ಟಿ (ಉಪಾಧ್ಯಕ್ಷರು ಬಂಟರ ಸಂಘ (ರಿ) ಸುರತ್ಕಲ್), ಸತೀಶ್ ಮುಂಚೂರು (ಉದ್ಯಮಿ ಸುರತ್ಕಲ್) ಅಶ್ವಿನ್ ಶೇಖ ಕುಡುಂಬೂರು ನಲ್ಯಗುತ್ತು, ವಸಂತ ಸುವರ್ಣ (ಅಧ್ಯಕ್ಷರು ದಕ್ಷಿಣ ಕನ್ನಡ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ), ದಿಲೀಪ್ ಮುಂಚೂರು (ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಚೇಳ್ಯಾರು ಮಧ್ಯ), ಕೊಡಿಪಾಡಿ ಸುಧಾಕರ ಶೆಟ್ಟಿ ಖಂಡಿಗೆ (ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ಚೇಳ್ಯಾರು), ಸರಿತಾ ರವೀಂದ್ರ ಶೆಟ್ಟಿ (ವಕೀಲರು ಬೆಳ್ಳಣ್), ಶರಣ್ ಚಿಲಿಂಬಿ (ಕಂಟೆಂಟ್ ಕ್ರಿಯೆಟರ್ ಪವರ್ ಹೌಸ್( ಭಾಗವಹಿಸಲಿದ್ದಾರೆ.



ಬಳಿಕ 7.30 ಕ್ಕೆ ಪೆರ್ಮೆದ ಕಲಾವಿದೆರ್ ಚೇಳ್ಯಾರು ಕಲಾವಿದರಿಂದ ರಾಮಚಂದ್ರ ಶೆಟ್ಟಿ ತಡಂಬೈಲ್ ರಚನೆಯ “ಕಟ್ಟೆ ಫ್ರೆಂಡ್ಸ್” ತುಳು ನಾಟಕ ವೈಶಾಕ್ ಕುಲಾಲ್ ಸೂರಿಂಜೆ ಇವರ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಚಂದ್ರಕಲಾ ಸದಾನಂದ ರೈ ಸಾರಥ್ಯದಲ್ಲಿ ಸುಕೇಶ್ ಶೆಟ್ಟಿ ಖಂಡಿಗೆ ಸಮಗ್ರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಸಮಾರಂಭದಲ್ಲಿ ರಂಗಸಂಗಮ 2026 ರ ಕಲಾಗೌರವ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ, ನಾಟಕಕಾರ ಕೀರ್ತನ್ ಭಂಡಾರಿ ಕುಳಾಯಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಚಿತ್ರ ಕಲಾವಿದ ದೇವಿಕಿರಣ್ ಗಣೇಶಪುರ ಪಡೆಯಲಿದ್ದಾರೆ.



















































































































