




ಭಾರತಿ ವಿದ್ಯಾ ಸಂಸ್ಥೆಗೆ ‘ಬನ’ ಚಿತ್ರ ತಂಡದವರು ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ಮನೋಹರ್ ರೈ ವೈಪಲ, ಜಯಪ್ರಕಾಶ್ ಶೆಟ್ಟಿ ಉಪ್ಪಳ, ನಾಯಕ ನಟ ನಿಹಾಲ್ ರೈ, ನಾಯಕಿ ಕೃತಿ ಶ್ರೀನಿವಾಸ್ ಪೂಜಾರಿ, ಚೇತನ್ ರೈ ಹಾಗೂ ಪ್ರಮುಖ ನಟಿ ಪ್ರಿಯಾ ಶೆಟ್ಟಿ ಅವರನ್ನು ಶಾಲೆಯ ಸಂಚಾಲಕ ಅಡ್ವೋಕೇಟ್ ಆದರ್ಶ್ ಶೆಟ್ಟಿಯವರು ಆತ್ಮೀಯವಾಗಿ ಸ್ವಾಗತಿಸಿದರು. ಚಿತ್ರ ತಂಡದ ಭೇಟಿಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸಂಭ್ರಮ ಮೂಡಿಸಿದ್ದು, ಕ್ಯಾಂಪಸ್ನಲ್ಲಿ ಸವಿನೆನಪಿನ ಕ್ಷಣಗಳನ್ನು ಸೃಷ್ಟಿಸಿತು. ಭಾರತಿ ಸಂಸ್ಥೆಗೆ ಭೇಟಿ ನೀಡಿದ ‘ಬನ’ ಚಿತ್ರತಂಡಕ್ಕೆ ಧನ್ಯವಾದ ಹಾಗೂ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.


















































































































