ಮೀರಾ ಭಯಂದರ್ ಪರಿಸರದಲ್ಲಿ ಜನಮನ್ನಣೆ ಗಳಿಸಿ ಪ್ರಸಿದ್ಧ ಸಂಘಟನೆಯಾಗಿರುವ ‘ನಮ ಜವನೆರ್’ ಸಂಸ್ಥೆಯ ಅಧ್ಯಕ್ಷರಾದ ಚೇತನ್ ಶೆಟ್ಟಿ ಮೂಡುಬಿದ್ರೆ ಇವರ ಮುಂದಾಳತ್ವದಲ್ಲಿ ಪ್ರತಿ ವರ್ಷದ ಹಾಗೆಯೇ ಈ ವರ್ಷ ಕೂಡಾ ತಮ್ಮ ಸಂಸ್ಥೆಯ ಹದಿನಾಲ್ಕನೇ ವಾರ್ಷಿಕೋತ್ಸವದ ಅಪೂರ್ವ ಯಶಸ್ಸನ್ನು ಆಚರಿಸುವ ಸಲುವಾಗಿ ಮೀರಾ ರೋಡ್ ಸ್ಟೇಷನ್ ಪಕ್ಕದಲ್ಲಿರುವ ನೂತನವಾಗಿ ಆರಂಭಗೊಂಡಿರುವ ‘ಗೋಲ್ಡನ್ ಲೀವ್ಸ್ ಬ್ಯಾಂಕ್ವೆಟ್ ಹಾಲ್’ನಲ್ಲಿ ಸಂಸ್ಥೆಯ ಸದಸ್ಯರಿಗಾಗಿ ವಿಶೇಷ ಸಭೆಯನ್ನು ಆಯೋಜಿಸಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಔತಣ ಕೂಟವನ್ನು ಅಕ್ಟೋಬರ್ 1ರಂದು ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಚೇತನ್ ಶೆಟ್ಟಿ ಮೂಡಬಿದ್ರೆ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷ ಕೂಡಾ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರೀ ಕೃಷ್ಣ ಲೀಲೋತ್ಸವ ದಾನಿಗಳ ಮತ್ತು ಸದಸ್ಯರೆಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಯಶಸ್ವಿಗೆ ಸದಸ್ಯರೆಲ್ಲರ ಶ್ರಮವಿದೆ ಎಂದು ನುಡಿದರು.




ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಬಾಲಚಂದ್ರ ರೈ ಮತ್ತು ಮೋಹಿತ್ ಸಾಲಿಯಾನ್, ಕಾರ್ಯದರ್ಶಿಗಳಾದ ಆಶಾ ಪದ್ಮನಾಭ ಶೆಟ್ಟಿಯವರು ಆಮಂತ್ರಿತರನ್ನು ವಂದಿಸಿ ಸ್ವಾಗತಿಸಿದರು. ಔತಣ ಕೂಟದ ಸಂಪೂರ್ಣ ಜವಾಬ್ದಾರಿಯನ್ನು ವೈಯುಕ್ತಿಕವಾಗಿ ವಹಿಸಿಕೊಂಡು ಸಮರ್ಪಕವಾಗಿ ನಿರ್ವಹಿಸಿದ ಗೋಲ್ಡನ್ ಲೀವ್ಸ್ ಬ್ಯಾಂಕ್ವೆಟ್ ಹಾಲ್ ನ ಮಾಲೀಕರಾದ ಪ್ರಕಾಶ್ ಶೆಟ್ಟಿ ಮೂಡುಬಿದ್ರೆ ಇವರಿಗೆ ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ಚಿತ್ರ, ವರದಿ : ದಿನೇಶ್ ಕುಲಾಲ್


















































































































