
ರಾಜೇಶ್ ಶೆಟ್ಟಿ ದೋಟ ಅವರ ‘ಗುತ್ತೊಂಜಿ ಕತೆಯಾಂಡ್’ ಬಹುಮಾನಿತ ಕೃತಿ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಯಾಯಿತು. ಹಿರಿಯ ಜನಪದ ವಿದ್ವಾಂಸರಾದ ಡಾ| ಚಿನ್ನಪ್ಪ ಗೌಡರವರು ಕೃತಿ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್ ಮತ್ತು ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ, ಶಶಿರಾಜ್ ರಾವ್ ಕಾವೂರು ಉಪಸ್ಥಿತರಿದ್ದರು. ತುಳುನಾಡಿನ ಗುತ್ತಿನ ಸುಂದರ ಕತೆಯನ್ನೊಳಗೊಂಡ ಈ ಸಾಂಸಾರಿಕ ನಾಟಕದಲ್ಲಿ ತುಳು ಮಣ್ಣಿನ ಸೊಗಡಿದೆ. ನಾಟಕದ ದೃಶ್ಯ ಜೋಡಣೆ, ಪಾತ್ರಗಳ ಸಂಘರ್ಷ, ಪ್ರಖರ ಸಂಭಾಷಣೆ, ಭಾವನೆಗಳ ತಾಕಲಾಟ ಎಲ್ಲವೂ ಮೇಳೈಸಿದ ಈ ನಾಟಕ ರಂಗಪ್ರಯೋಗಕ್ಕೆ ಒಳ್ಳೆಯ ಕೃತಿಯಾಗಿದೆ.

















































































































