ಸರಕಾರದಿಂದ ಮಾನ್ಯತೆ ಪಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲೆಯ 2026 -31ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಚೈತ್ರ ಕೆ.ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ, ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ, ತಾಲೂಕು ಅಧ್ಯಕ್ಷರುಗಳಾಗಿ ರವೀಂದ್ರ ಶೆಟ್ಟಿ (ಕಾರ್ಕಳ), ಸಂದೀಪ್ ನಾಯಕ್ (ಬೈಂದೂರು), ಜಯಪ್ಪ ಟಿ (ಕುಂದಾಪುರ), ವೀಣಾ (ಬ್ರಹ್ಮಾವರ), ಶಬಾನ ಫರ್ವಿನ್ ಶೇಕ್ (ಉಡುಪಿ) ಅವರನ್ನು ಆಯ್ಕೆ ಮಾಡಲಾಯಿತು.

















































































































