ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರ ನಗರದಲ್ಲಿರುವ ಶ್ರೀಮತಿ ಚನ್ನಬಸವಮ್ಮ ಲಿಂಗನಗೌಡ ಪಾಟೀಲ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಟೀಲ್ ತಾಟುಗಳನ್ನು ಒಳಗೊಂಡಂತೆ ಸುಮಾರು 2 ಲಕ್ಷ ರೂಪಾಯಿಗೂ ಮೇಲ್ಪಟ್ಟು ಮೌಲ್ಯದ ಊಟದ ಪರಿಕರಗಳನ್ನು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ರಾಜೇಂದ್ರ ವಿ ಶೆಟ್ಟಿಯವರು ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ದೇಣಿಗೆಯಾಗಿ ನೀಡಿದರು. ಇತ್ತೀಚೆಗೆ ಆ ಶಾಲೆಯ ಕಾರ್ಯಕ್ರಮಯೊಂದರಲ್ಲಿ ಬಾಗವಹಿಸಿದ್ದ ರಾಜೇಂದ್ರ ಶೆಟ್ಟಿಯವರು ಮಕ್ಕಳು ಊಟದ ತಟ್ಟೆ ಇಲ್ಲದೆ ಪರದಾಡುವದನ್ನು ಕಂಡು ಶಾಲೆಗೆ ಈ ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಮೂಹ ರಾಜೇಂದ್ರ ಶೆಟ್ಟಿಯವರ ಗುಣವನ್ನು ಕೊಂಡಾಡಿ, ರಕ್ಷಾ ಬಂಧನದಲ್ಲಿ ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಕೊರವರ ಅವರು ಶಿಕ್ಷಕಿಯರಾದ ಶ್ರೀಮತಿ ಎ.ವಿ ಶೆಟ್ಟರ, ಶ್ರೀಮತಿ ಎಸ್.ಜಿ ನವಲಗುಂದ, ಶ್ರೀಮತಿ ಎಸ್.ಕೆ ಹರ್ಡೀಕರ, ಶ್ರೀಮತಿ ವೀಣಾ ಉಪಾಧ್ಯಾಯ, ಶ್ರೀಮತಿ ಎ.ವೈ ಮರಕುಂಬಿ, ಶ್ರೀಮತಿ ವಿ.ಡಬ್ಲು ಬನ್ನಾ, ಶ್ರೀಮತಿ ಎಸ್.ಪಿ ಮುಗದೂರ, ಶ್ರೀಮತಿ ಜಿ.ಎ ಬಿಕ್ಕಣ್ಣವರ, ಶ್ರೀಮತಿ ವಿ.ಪಿ ಪಾಟೀಲ, ಶ್ರೀಮತಿ ಎಸ್.ಎಚ್ ಕುಲಕರ್ಣಿ ಹಾಗೂ ಶ್ರೀಮತಿ ಆರ್.ಎಂ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.


















































































































