ಪುತ್ತೂರು ತಾಲೂಕು ಬಂಟರ ಸಂಘದಿಂದ ಸಂಘದ ಉಪಾಧ್ಯಕ್ಷ ಸ್ವರ್ಗೀಯ ಜಯಾನಂದ ಬಂಟ್ರಿಯಾಲ್ ರಿಗೆ ನುಡಿನಮನ ಸಲ್ಲಿಸಲಾಯಿತು. ಬಂಟರ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ, ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಜಯಾನಂದ ಬಂಟ್ರಿಯಾಲ್ ಒಬ್ಬ ಒಳ್ಳೆ ಜನನಾಯಕ. ಸಾಮನ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದ ಸಜ್ಜನ ರಾಜಕಾರಣಿಯಾಗಿದ್ದು, ಬಂಟ ಸಮಾಜದ ನಾಯಕ ಎಂದು ಹೇಳಿಕೊಳ್ಳಲು ನಮಗೂ ಒಂದು ಹೆಮ್ಮೆ. ಮೃದು ಸ್ವಭಾವದ ಮಿತ ಭಾಷಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಇವರು ನಮ್ಮನ್ನು ಅಗಲಿದ್ದು ಬಹಳ ಬೇಸರ ಮತ್ತು ಅವರಿಂದ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರಣಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹೇಳಿದರು. ದಯಾನಂದ ರೈ ಮನವಳಿಕೆ ಮಾತನಾಡಿ, ಜಯಾನಂದ ಬಂಟ್ರಿಯಾಲ್ ಒಬ್ಬ ಸಜ್ಜನ ಮತ್ತು ಸಮಾಜದ ಸರ್ವರ ಜೊತೆ ಬೆರೆಯುತ್ತಿದ್ದ ನಾಯಕ. ಅವರ ಅಗಲಿಕೆ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಗುಣಗಾನ ಮಾಡಿದರು.




ಮಾತೃ ಸಂಘದ ಸಂಚಾಲಕ ದಂಬೆಕ್ಕಾನ ಸದಾಶಿವ ರೈ, ತಾಲೂಕು ಸಂಘದ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಆರುವಾರ, ಜೊತೆ ಕಾರ್ಯದರ್ಶಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ಪುಲಸ್ಯ ರೈ, ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಶಶಿರಾಜ್ ರೈ ಮುಂಡಾಲ, ಪ್ರಕಾಶ್ ರೈ ಸಾರಕೆರೆ, ರಾಧಾಕೃಷ್ಣ ರೈ ಪರಾರಿ, ನಿತಿನ್ ಪಕ್ಕಳ, ಶಶಿಕಿರಣ್ ರೈ ನೂಜಿಬೈಲ್, ದಯಾನಂದ ರೈ ಕೋರ್ಮಂಡ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ, ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ವತ್ಸಲಾ ಪಿ ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ಹೇಮಂತ್ ಕುಮಾರ್ ರೈ ಮನವಳಿಕೆ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.















































































































