ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ, ಬಂಟರ ಮಹಿಳಾ ವಿಭಾಗ, ಬಂಟರ ಯುವ ವಿಭಾಗ ಇದರ ಸಹಭಾಗಿತ್ವದಲ್ಲಿ ಆಗಸ್ಟ್ 21 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆಯು ಅದ್ದೂರಿಯಾಗಿ ನೆರವೇರಿತು. ಮಹಾಪೂಜೆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಮುಖ್ಯ ಅತಿಥಿಗಳಾಗಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ವಿಂದ್ಯಾ ಎಸ್ ರೈ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ವಸುಧಾ ಪಿ ಶೆಟ್ಟಿ, ಸಂಚಾಲಕಿ ಜಯಲಕ್ಷ್ಮಿ ಎನ್ ಸಾಮಾನಿ ಉಪಸ್ಥಿತರಿದ್ದರು.




ಶಾಸಕ ಹರೀಶ್ ಪೂಂಜ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ಬಂಟರ ಸಂಘದ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ರಾಜು ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಮಾತೃ ಸಂಘದ ಸಂಚಾಲಕರಾದ ಜಯರಾಮ ಭಂಡಾರಿ ಧರ್ಮಸ್ಥಳ, ಮಾಜಿ ಅಧ್ಯಕ್ಷರಾದ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ರಘುರಾಮ್ ಶೆಟ್ಟಿ ಸಾಧನ, ಜಯರಾಮ್ ಶೆಟ್ಟಿ ಪಡಂಗಡಿ, ನಿರ್ದೇಶಕರಾದ ರಾಜೇಶ್ ಶೆಟ್ಟಿ ನವಶಕ್ತಿ, ನವೀನ್ ಸಾಮಾನಿ ಕರಂಬಾರುಬೀಡು, ಜಯಂತ್ ಶೆಟ್ಟಿ ಕುಂಟಿಣಿ, ಭಾಸ್ಕರ ಶೆಟ್ಟಿ ಕಾರ್ಯಾಣ, ಬಂಟರ ಯುವ ವಿಭಾಗದ ಅಧ್ಯಕ್ಷ ಅಜೇಯ್ ಶೆಟ್ಟಿ ಭಂಡಾರಿಗುಡ್ಡೆ, ಉಪಾಧ್ಯಕ್ಷ ಕಾರ್ತಿಕ್ ರೈ ಇಡ್ಯಾಲ, ಕಾರ್ಯದರ್ಶಿ ನಿಧೀಶ್ ಶೆಟ್ಟಿ ಕೊರೆಲ್ಯ, ಕೋಶಾಧಿಕಾರಿ ನಿತಿನ್ ಶೆಟ್ಟಿ ಪಣೇಜಾಲು ಹಾಗೂ ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಬಳೆಂಜ, ಸಾಂಸ್ಕೃತಿಕ ಕಾರ್ಯದರ್ಶಿ ಸಚಿನ್ ಶೆಟ್ಟಿ ಕುರೇಲ್ಯ, ಬಂಟರ ಮಹಿಳಾ ವಿಭಾಗದ ಉಪಾಧ್ಯಕ್ಷೆ ರಂಜಿತಾ ಶೆಟ್ಟಿ, ಕಾರ್ಯದರ್ಶಿ ಸಂಸ್ಕೃತಿ ರೈ, ಕೋಶಾಧಿಕಾರಿ ವಿಂದ್ಯಾ ಶೆಟ್ಟಿ, ಕ್ರೀಡಾ ಸಂಚಾಲಕಿ ಉಷಾ ಶೆಟ್ಟಿ, ನಿರ್ದೇಶಕರಾದ ಪ್ರಿಯಾ ಶೆಟ್ಟಿ, ಸುಜಾತ ಶೆಟ್ಟಿ ಪೆರಿಂಜೆ, ರಕ್ಷಿತಾ ಶೆಟ್ಟಿ, ಅಶ್ವಿನಿ ಶೆಟ್ಟಿ, ಶುಭಶ್ರೀ ಶೆಟ್ಟಿ, ಸಂಗೀತ ಶೆಟ್ಟಿ ಸೇರಿದಂತೆ ಕುಮಾರ್ ಹೆಗ್ಡೆ, ದೇವದಾಸ್ ಶೆಟ್ಟಿ ಹಿಬರೋಡಿ, ಅವಿನಾಶ್ ರೈ ನೇತ್ರನಗರ ಧರ್ಮಸ್ಥಳ, ಸುಮುಖ ಸಂತೋಷ್ ಶೆಟ್ಟಿ, ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಸೇರಿದಂತೆ ಬಂಟ ಸಮಾಜದ ಬಂಧುಗಳು ಭಾಗವಹಿಸಿದ್ದರು. ಪವಿತ್ರಾ ಶೆಟ್ಟಿ ಸ್ವಾಗತಿಸಿದರು. ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.















































































































