ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಪರವಾಗಿ ದೇಣಿಗೆ ರೂಪದಲ್ಲಿ ಎರಡು ಕಡೆ ಅಡ್ಡ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಶ್ರೀ ದುರ್ಗಾ ಫ್ಯಾಬ್ರಿಕೇಷನ್ ವಕ್ಸ್೯ ಸುರತ್ಕಲ್ ಇದರ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು ಒದಗಿಸಿ ಕೊಟ್ಟಿದ್ದು, ಇದರ ಉದ್ಘಾಟನೆಯನ್ನು ಅಸೋಸಿಯೇಶನ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫ್ಯಾಬ್ರಿಕೇಷನ್ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು, ಸುಭಾಷಿತನರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ ಆಚಾರ್ಯ, ಕಮಲಾಕ್ಷಿ ತಾರಾನಾಥ ಸಾಲ್ಯಾನ್, ಪ್ರೇಮನಾಥ ಹೆಗ್ಡೆ, ನಾಗಣ್ಣ ಶೆಟ್ಟಿ, ಸಹನಾ ಗಿರೀಶ್, ದುರ್ಗಾ ಫ್ಯಾಬ್ರಿಕೇಷನ್ ನ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಒದಗಿಸಿದ ದಿನೇಶ್ ಶೆಟ್ಟಿ ಅವರಿಗೆ ಅಸೋಸಿಯೇಶನ್ ಕೃತಜ್ಞತೆ ಸಲ್ಲಿಸಿದೆ.






















































































































