ರಾಷ್ಟçಮಟ್ಟದ ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಎನ್.ಟಿ.ಎ. ನಡೆಸಿದ ನೀಟ್ ೨೦೨೬ರ ಫಲಿತಾಂಶದಲ್ಲಿ ೭೨೦ಕ್ಕೆ ೬೮೦ ಅಂಕ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ, ರಾಷ್ಟçಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ೨೬೭ನೇ ರ್ಯಾಂಕ್(ಕೆಟಗರಿಯಲ್ಲಿ ೧೭೮ನೇ ರ್ಯಾಂಕ್) ಗಳಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮೇಧಾಂಶ್ ಎನ್. ಬಿ ಇವರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹಾಗೂ ಸಮಸ್ತ ಜ್ಞಾನಸುಧಾ ಬಳಗ ಸನ್ಮಾನಿಸಿ ಸಂಭ್ರಮಿಸಿತು. ಇವರಿಗೆ ಇದೇ ಸಂದರ್ಭದಲ್ಲಿ ಟ್ರಸ್ಟಿನಿಂದ ರೂ. ೨.೫೦ ಲಕ್ಷವನ್ನು ಅವರ ಸಾಧನೆಗೆ ಪ್ರೋತ್ಸಾಹ ಧನವನ್ನು ಘೋಷಿಸಿದರು. ಇವರ ಹೆತ್ತವರಾದ ನಿಟ್ಟೆ ಇಂಜಿನಯರಿAಗ್ ಕಾಲೇಜಿನ ಡೀನ್ ಆಗಿರುವ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ನರಸಿಂಹ ಕೆ ಬೈಲ್ಕೇರಿ ಹಾಗೂ ಇಲೆಕ್ಟಾçನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪದ್ಮಾವತಿ ಕೆ. ಉಪಸ್ಥಿತರಿದ್ದರು. ಇದೇ ಸಂದರ್ಭ ೯೯.೯೭೨೦೯೮೫ ಪರ್ಸಂಟೈಲ್ ಗಳಿಸಿ ೭೨೦ರಲ್ಲಿ ೬೭೦ ಅಂಕ ಪಡೆದು, ರಾಷ್ಟçಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ೫೧೯ನೇರ್ಯಾಂಕನ್ನು (ಕೆಟಗರಿ ವಿಭಾಗದಲ್ಲಿ ೩೨೭ನೇ ರ್ಯಾಂಕ್) ತನ್ನದಾಗಿಸಿಕೊಂಡ ಮನೋಜ್ ಎಂ ಹಾಗೂ ೯೯.೯೬೨೯೪೮೧ ಪರ್ಸಂಟೈಲ್ನೊಂದಿಗೆ ರಾಷ್ಟçಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ೭೦೧ನೇ ರ್ಯಾಂಕನ್ನು (ಕೆಟಗರಿ ವಿಭಾಗದಲ್ಲಿ ೪೨೫ನೇರ್ಯಾಂಕ್) ಪಡೆದ ಅನಿರುದ್ಧ್ ಆರ್ ಉಡುಪ ಇವರನ್ನು ಸನ್ಮಾನಿಸಲಾಯಿತು. ಇವರಿಬ್ಬರಿಗೂ ಇದೇ ಸಂದರ್ಭದಲ್ಲಿ ಟ್ರಸ್ಟಿನಿಂದ ತಲಾ ರೂ. ೨. ಲಕ್ಷವನ್ನು ಅವರ ಸಾಧನೆಗೆ ಪ್ರೋತ್ಸಾಹ ಧನವನ್ನು ಘೋಷಿಸಿದರು.



ಈ ಬಾರಿಯ ರಾಷ್ಟ್ರಮಟ್ಟದ ನಡೆಯುವ ನೀಟ್-೨೦೨೬ರ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಒಟ್ಟು ೫೨೮ ವಿದ್ಯಾರ್ಥಿಗಳಲ್ಲಿ ೧೫ ವಿದ್ಯಾರ್ಥಿಗಳು ೬೦೦ಕ್ಕಿಂತ ಅಧಿಕ ಅಂಕವನ್ನು, ೫೯ ವಿದ್ಯಾರ್ಥಿಗಳು ೫೫೦ಕ್ಕಿಂತ ಅಧಿಕ ಅಂಕವನ್ನು ಹಾಗೂ ೧೩೩ ವಿದ್ಯಾರ್ಥಿಗಳು ೫೦೦ಕ್ಕಿಂತ ಅಧಿಕ ಅಂಕವನ್ನು ಪಡೆದಿರುತ್ತಾರೆ. ಸಂಸ್ಥೆಯ ೨೬೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್ಗಿಂತ ಅಧಿಕ ಅಂಕ ಪಡೆದಿರುವುದನ್ನು ಸ್ಮರಿಸಿಕೊಳ್ಳ ಬಹುದು. ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿ ಮೇಧಾನ್ಶ್ರವರ ಪೂರ್ವಶಾಲೆಯಾದ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಪ್ರಾಂAಶುಪಾಲೆ ಶ್ರೀಮತಿ ಅನಿತಾ ಪಿ ರಾಜ್ರವರು ಉಪಸ್ಥಿತರಿದ್ದು, ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಹೆತ್ತವರು, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ಟ್ರ ಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಶ್ರೀ ಅನಿಲ್ ಕುಮಾರ್ ಜೈನ್ ಹಾಗೂ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ವಿದ್ಯಾರ್ಥಿಗಳ ಆಪ್ತ ಸಮಾಲೋಚಕರು ಡಾ. ಪ್ರಸನ್ನ ಹೆಗ್ಡೆ ಸಹಿತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪ್ರಾAಶುಪಾಲರುಗಳು, ಉಪಪ್ರಾಂಶುಪಾಲರುಗಳು, ಡೀನ್ಸ್ಗಳು, ವಿಭಾಗ ಮುಖ್ಯಸ್ಥರುಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದವರ್ಗ, ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





















































































































