ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಎಂ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ನವೀಕರಣ ಕಾರ್ಯವು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಸಮಾಜ ಬಾಂಧವರಿಂದ ದೇಣಿಗೆ ಸಂಗ್ರಹದ ಮನವಿ ಪತ್ರವನ್ನು ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ತಾಲೂಕು ಸಮಿತಿ ಸಂಚಾಲಕ ದಂಬೆಕ್ಕಾನ ಸದಾಶಿವ ರೈಯವರ ನೇತೃತ್ವದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಬಿಡುಗಡೆ ಮಾಡಲಾಯಿತು.

ನಿಕಟಪೂರ್ವ ಸಂಚಾಲಕ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕರಾದ ನಿತ್ಯಾನಂದ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲ್, ವತ್ಸಲಾ ಪಿ ಶೆಟ್ಟಿ, ಜೈರಾಜ್ ಭಂಡಾರಿ ನೋಣಾಲು, ದಯಾನಂದ ರೈ ಕೋರ್ಮಂಡ, ಸುದೇಶ್ ಆರ್ ಶೆಟ್ಟಿ, ತುಳು ಅಕಾಡೆಮಿ ವಿಶ್ರಾಂತ ರಿಜಿಸ್ಟರರ್ ಚಂದ್ರಹಾಸ ರೈ, ತಾಲೂಕು ಬಂಟರ ಸಂಘದ ಕೊಶಾಧಿಕಾರಿ ಸಂತೊಷ ಕುಮಾರ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಬಂಟರ ಭವನದ ಮ್ಯಾನೇಜರ್ ರವಿಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.























































































































