
ಭಕ್ತಿಯ ಶಿಖರ, ನಂಬಿಕೆಯ ನೆಲೆ, ಶಕ್ತಿಯ ಸಂಕೇತ, ಸಂಸ್ಕೃತಿಯ ಸಿರಿತನ ಹಾಗೂ ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ವೈಭವವನ್ನು ಸಾರುವ ಪವಿತ್ರ ಕ್ಷೇತ್ರವೇ ಶ್ರೀ ಕ್ಷೇತ್ರ ಮಂದಾರ್ತಿ. ಮಂದಾರ್ತಿ ಕೇವಲ ಒಂದು ದೇವಾಲಯವಲ್ಲ. ಅದು ಭಕ್ತಿಯ ಅನುಭವ, ಶಕ್ತಿಯ ಆರಾಧನೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ಕರಾವಳಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಬೆಳಗುತ್ತಿರುವ ದಿವ್ಯ ಶಕ್ತಿಪೀಠವಾಗಿದೆ. ಇಂತಹ ಶ್ರೀ ದುರ್ಗೆಯ ಪದತಲದಲ್ಲಿ ಜನಿಸಿ ಬೆಳೆದ ಅಮರನಾಥ ಶೆಟ್ಟಿ ಹೆಗ್ಗುಂಜೆಯವರು 2026 –29ನೇ ಸಾಲಿನ ಅವಧಿಗೆ ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಅಣಿಯಾಗಿದ್ದಾರೆ.


ಅಮರನಾಥ ಶೆಟ್ಟಿಯವರು 2014 -16 ಹಾಗೂ 2016 -18 ರವರೆಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಮಾಜಸೇವಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿದ್ಯಾರ್ಥಿವೇತನ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿ, 2022 ರಿಂದ 2024 ರವರೆಗೆ ಖಜಾಂಚಿಯಾಗಿ ಅತ್ಯಂತ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತತೆಯಿಂದ ಕಾರ್ಯ ನಿರ್ವಹಿಸಿ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಬಂಟರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಕ್ಯಾಶ್ಲೆಸ್ ವ್ಯವಹಾರ ವ್ಯವಸ್ಥೆ’ಯನ್ನು ಜಾರಿಗೆ ತಂದ ಸಾಧನೆ ಅವರದ್ದಾಗಿದೆ. ಅಷ್ಟೇ ಅಲ್ಲದೇ ಸಂಘದ ಪ್ರತಿಯೊಬ್ಬ ಸದಸ್ಯರ ನೋವು ನಲಿವುಗಳಿಗೆ ಸ್ಪಂದಿಸಿ, ಅಗತ್ಯ ಸಂದರ್ಭಗಳಲ್ಲಿ ಸಹಾಯ ಹಸ್ತ ಚಾಚುವ ಮಾನವೀಯ ಗುಣವನ್ನು ಹೊಂದಿರುವ ವ್ಯಕ್ತಿತ್ವ ಅವರದ್ದು. ಸಂಘದ ಅಭಿವೃದ್ಧಿ, ಸದಸ್ಯರ ಹಿತಾಸಕ್ತಿ ಹಾಗೂ ಸುಸಂಘಟಿತ ಆಡಳಿತದ ಬಗ್ಗೆ ಸದಾ ಕಾಳಜಿ ವಹಿಸಿರುವ ಅವರು, ನೇರ ನಡೆ ನುಡಿಯುಳ್ಳ ಧೀಮಂತ ಹಾಗೂ ಸಮರ್ಥ ನಾಯಕರೆಂದು ಗುರುತಿಸಿಕೊಂಡಿದ್ದಾರೆ.

ಇಂತಹ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸೇವಾ ಮನೋಭಾವದ ಅಮರನಾಥ ಶೆಟ್ಟಿ ಹೆಗ್ಗುಂಜೆಯವರು ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಬೆಂಗಳೂರು ಬಂಟರ ಸಂಘವು ಇನ್ನಷ್ಟು ಪ್ರಗತಿ ಹಾಗೂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿದೆ ಎಂಬುದು ನಮ್ಮ ದೃಢ ನಂಬಿಕೆ. ಸರಳತೆ, ಸಜ್ಜನಿಕೆ ತಮ್ಮ ಜೀವನದ ಆದರ್ಶವಾಗಿಸಿಕೊಂಡಿರುವ ಅಮರನಾಥ ಶೆಟ್ಟಿಯವರು ಸಂಕಷ್ಟದಲ್ಲಿರುವವರಿಗೆ ಸದಾ ನೆರವಾಗುತ್ತಾ, ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜನನಾಯಕರು. ಇಂತಹ ಸಮರ್ಥ, ನಿಷ್ಠಾವಂತ ಹಾಗೂ ಜನಪರ ಅಭ್ಯರ್ಥಿಗೆ ಮತ ನೀಡಿ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಅಭೂತಪೂರ್ವ ಬಹುಮತದಿಂದ ಆಯ್ಕೆ ಮಾಡಿ ವಿಜಯಶಾಲಿಯನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರಿಗಿದೆ.






























































































































