


ಬಂಟರ ಯಾನೆ ನಾಡವರ ಸಂಘ ಕೊಪ್ಪ (ರಿ) ಇದರ 41ನೇ ವಾರ್ಷಿಕೋತ್ಸವ ಸಮಾರಂಭವು ಇತ್ತೀಚಿಗೆ ಅನನ್ಯ ವಿಜಯ ಅಜಿಲ ಸ್ಮಾರಕ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಪ್ಪ ಬಂಟರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಾಸಕ ಟಿಡಿ ರಾಜೇಗೌಡ, ಸುಧಾಕರ ಶೆಟ್ಟಿ ತುಮಾಖಾನೆ, ಮಾಜಿ ಶಾಸಕ ಸುಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ, ನರೇಂದ್ರ ಶೆಟ್ಟಿ, ಉದ್ಯಮಿ ವಿಜಯ ಹೆಗ್ಡೆ, ಶ್ರೀಮತಿ ಗೀತಾ ವಿಜಯ ಅಜಿಲ, ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.































































































































