



ಬಂಟರ ಸಂಘ ಬೆಂಗಳೂರು ಪ್ರಾರ್ಥನಾ ಮಂದಿರ ಸಮಿತಿಯ ವತಿಯಿಂದ ಏಪ್ರಿಲ್ 05 ರಂದು ಉಚಿತ ಕುಣಿತ ಭಜನಾ ತರಬೇತಿ ತರಗತಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ವಿಜಯ್ ಜೆ ಶೆಟ್ಟಿ ಹಾಲಾಡಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಪ್ರಾರ್ಥನಾ ಮಂದಿರ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಶೇಖ ಅವರು ಆಗಮಿಸಿದವರಿಗೆ ಸ್ವಾಗತವನ್ನು ಕೋರಿದರು. ಸಂಘದ ಹಿರಿಯ ಸದಸ್ಯರಾದ ಕೊರ್ಗಿ ಆನಂದ ಶೆಟ್ಟಿ ಅವರು ಮಕ್ಕಳಿಗೆ ಕುಣಿತ ಭಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರು, ಕುಣಿತ ಭಜನಾ ತರಬೇತುದಾರರಾದ ಶರಣ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ಮಕ್ಕಳಿಗೂ ಪೋಷಕರಿಗೂ ಧನ್ಯವಾದಗಳು ಸಮರ್ಪಿಸಿದರು.


ನಂತರ ಸಂಘದ ಶ್ರೀ ವರಸಿದ್ದಿ ವಿನಾಯಕ ಪ್ರಾರ್ಥನಾ ಮಂದಿರದಲ್ಲಿ ತರಬೇತುದಾರರು ಮಕ್ಕಳಿಂದ ಭಜನೆ ಆಡಿಸಿ ಕುಣಿತ ಭಜನೆ ತರಬೇತಿ ತರಗತಿಗೆ ಚಾಲನೆ ನೀಡಿದರು. ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಚಾಲಕ ಪ್ರಸಾದ್ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು. ಕುಣಿತ ಭಜನೆ ತರಗತಿಗೆ ಸೇರಿಕೊಳ್ಳಲು ಆಸಕ್ತಿಯುಳ್ಳವರು ಶೋಭಾ ಶೇಖ ಅವರನ್ನು (9901885998) ಸಂಪರ್ಕಿಸಬಹುದು.

























































































































