
ಸವಣೂರು ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾರ್ಚ್ 25 ಮತ್ತು 26ರಂದು 12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ (ಅರ್ಧ ಏಕಾಹ ಹಾಗೂ ಕುಣಿತ ಭಜನೆ) ನಡೆಯಲಿದೆ. ಮಾರ್ಚ್ 25ರಂದು ಬೆಳಿಗ್ಗೆ 6:30 ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭ, ಬೆಳಿಗ್ಗೆ 10ಕ್ಕೆ ಊರ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ, ಸಂಜೆ ತಂತ್ರಿಗಳ ಆಗಮನ, ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30 ಕ್ಕೆ ಅರ್ಧ ಏಕಾಹ ಭಜನೆ ಸಮಾರೋಪ, ಬಳಿಕ ಕುಣಿತ ಭಜನೆ ನಡೆಯಲಿದೆ. ರಾತ್ರಿ ಎಂಟರಿಂದ ಅನ್ನಸಂತರ್ಪಣೆ, ಮಾರ್ಚ್ 26ರಂದು ಬೆಳಿಗ್ಗೆ 6ರಿಂದ ಮಹಾಗಣಪತಿ ಹೋಮ, ನಾಗತಂಬಿಲ, ಕಲಶಾಭಿಷೇಕ ಸಹಿತ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಎಂಟರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಅರ್ಚಕ ಪದ್ಮನಾಭ ಕುಂಜತ್ತಾಯ, ಪವಿತ್ರ ಪಾಣಿ ರತ್ನಾಕರ ಕುಂಜತ್ತಾಯ, ಸದಸ್ಯರುಗಳಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಆಶಾ ಪ್ರವೀಣ್ ಕಂಪ, ಶಿವರಾಮ ಗೌಡ ಮೆದು, ಮೋನಪ್ಪ ಗೌಡ ಆರೇಲ್ತಡಿ, ರಾಕೇಶ್ ರೈ ಕೆಡೆಂಜಿ ಹಾಗೂ ಪ್ರೇಮಾ ಪುಟ್ಟಣ್ಣ ನಾಯ್ಕ ಅರೇಲ್ತಡಿ ಹಾಗೂ ಊರ ಭಕ್ತಾದಿಗಳು, ಜಾತ್ರಾ ಮಹೋತ್ಸವ ಸಮಿತಿಯವರು ತಿಳಿಸಿದ್ದಾರೆ.




























































































































